| ಉಡುಪಿ, ಫೆ 11: ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಉಡುಪಿಯ ಹಿಜಾಬ್ ಪ್ರಕರಣದ ಕುರಿತು ಎನ್‌ಐಎ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಈ ಇಡೀ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ ಎಂದ ಅವರು, ಹೈದರಾಬಾದ್, ಬೆಂಗಳೂರು ಮತ್ತು ಕೇರಳದ ಜನರು ಈ ಶಾಂತಿಯುತ ಜಿಲ್ಲೆಯನ್ನು ಕದಡಲು ಬಯಸುತ್ತಾರೆ. ಕೂಲಂಕಷವಾದ ಸಮಗ್ರ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
“ಹೈಕೋರ್ಟ್ ಆದೇಶ ನೀಡಿದ ನಂತರವೂ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಅವರು ಬಳಸಿಕೊಂಡಿದ್ದಾರೆ. ಇದನ್ನು ವಿದ್ಯಾರ್ಥಿಗಳೇ ಮಾಡುತ್ತಿಲ್ಲ. ಅವರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಬೆಂಬಲಿಸುತ್ತದೆ ಇವರ ಜೊತೆ ಕಾಂಗ್ರೆಸ್ ಕೂಡಾ ಸೇರಿಕೊಂಡಿದೆ ಎಂದು ಆರೋಪಿಸಿದ್ದಾರೆ. ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುಪ್ರಿಂ ಕೊರ್ಟ್ ಗೆ ಹೋಗಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಜೊತೆಗೆ ಕಾಂಗ್ರೆಸ್ ಕೂಡಾ ಸೇರಿಕೊಂಡಿದೆ. ಓವೈಸಿ ಪಾರ್ಟಿಯವರು ಇಲ್ಲಿಗೆ ಬಂದಿದ್ದಾರೆ. ಹೈದರಾಬಾದ್ ನಿಂದ ಇಲ್ಲಿಗೆ ಬಂದು ಮಾಡಲು ಏನಿದೆ? ಹೊರರಾಜ್ಯಗಳಿಂದ ಟ್ರೈನರ್ಸ್ ಬಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ ಈ ಸಾಕ್ಷ್ಯಗಳನ್ನು ಇಲಾಖೆಗೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಈ ವಿವಾದ ಮೂಲಕ ಶಾಂತಿ ಕದಡುವ ಅಪಾಯವಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಕೂಡ ಸ್ಪಷ್ಟವಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಸಿಎಫ್‌ಐ ಜೊತೆ ಕೈ ಜೋಡಿಸಿದೆ. ಒವೈಸಿಯವರ ರಾಜಕೀಯ ಪಕ್ಷದ ಜನ ಉಡುಪಿಗೆ ಬಂದಿದ್ದಾರೆ. ಕೆಲವರು ಹೈದರಾಬಾದ್‌ನಿಂದ ಬಂದು ಉಡುಪಿ ಸುತ್ತಿದ್ದಾರೆ. ಉಡುಪಿಯ ಮುಸ್ಲಿಂ ಮುಖಂಡರು ನಮ್ಮೊಂದಿಗೆ ಉತ್ತಮ ಸಂಪರ್ಕದಲ್ಲಿದ್ದಾರೆ. ಮುಸ್ಲಿಂ ಮುಖಂಡರ ಜೊತೆ ಹಲವಾರು ಸಭೆಗಳು ಆಗಿದೆ. ನಿಜವಾದ ವಿದ್ಯಾವಂತ ಮುಸ್ಲಿಂರಿಗೆ ಸಂಘರ್ಷ ಬೇಡವಾಗಿದೆ. ಹಿಂದೂ-ಮುಸಲ್ಮಾನರು ಒಗ್ಗಟ್ಟಾಗಿ ದೇಶ ಮುನ್ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. | |