ಪಡುಬಿದ್ರಿ: ಸಾಫ್ಟ್ ವೇರ್ ಉದ್ಯೋಗಿ 22 ವರ್ಷದ ಯುವತಿ ನೇಣಿಗೆ ಶರಣು
ಪಡುಬಿದ್ರಿ ಫೆ.10(ಉಡುಪಿ ಟೈಮ್ಸ್ ವರದಿ): ವರ್ಕ್ ಫ್ರಂ ಹೋಂ ಮೂಲಕ ಕೆಲಸ ನಿರ್ವಹಿಸುತ್ತಿದ್ದ ಹೈದರಬಾದ್‌ನ ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದ ಸೌಜನ್ಯ ಎಂಬ ಯುವತಿ ಇಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡ್ಸಾಲು ಗ್ರಾಮದಲ್ಲಿ ನಡೆದಿದೆ.
ಹೈದರಬಾದ್‌ನ ವಿಪ್ರೋ ಕಂಪೆನಿಯ ಉದ್ಯೋಗಿಯಾಗಿದ್ದ 22 ವರ್ಷದ ಸೌಜನ್ಯ ಅವರು,10 ತಿಂಗಳಿನಿಂದ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯಲ್ಲಿ ತಾನು ಕೆಲಸ ಮಾಡಿಕೊಂಡಿದ್ದ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ತಂದೆ ರಾಮಕೃಷ್ಣ ಕೋಟ್ಯಾನ್ ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.