ಹಿಜಬ್-ಕೇಸರಿ ಶಾಲು ವಿವಾದದಲ್ಲಿ ಪಾಕಿಸ್ತಾನ ತಲೆದೂರಿಸಬಾರದು-ಕಾಂಗ್ರೆಸ್ ನಾಯಕಿ ಫಾತಿಮಾ
ರಾಯಚೂರು ಫೆ.10: ರಾಜ್ಯದಲ್ಲಿ ನಡೆದಿರುವ ಹಿಜಬ್, ಕೇಸರಿ ಶಾಲು ವಿವಾದ ನಮ್ಮ ಕುಟುಂಬದ ಮಧ್ಯೆ ನಡೆಯುತ್ತಿರುವ ಸಮಸ್ಯೆ ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಇದರಲ್ಲಿ ಪಾಕಿಸ್ತಾನ ತಲೆದೂರಿಸಬಾರದು ಎಂದು ರಾಯಚೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನಾಯಕಿ ಫಾತಿಮಾ ಹುಸೇನ್ ತಿಳಿಸಿದ್ದಾರೆ.
ಹಿಜಾಬ್‍ಗೆ ಪಾಕಿಸ್ತಾನದಿಂದ ಬೆಂಬಲ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ವಿವಾದವನ್ನು ನಾವೇ ಬಗೆಹರಿಸುತ್ತೇವೆ ನಮ್ಮ ದೇಶದ ಆಂತರಿಕ ವಿಚಾರದ ಬಗ್ಗೆ ಮಾತನಾಡಲು ಪಾಕಿಸ್ತಾನಕ್ಕೆ ಏನು ಹಕ್ಕಿದೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಹಿಜಾಬ್ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು ಎಂದ ಅವರು, ನಿಮ್ಮ ದೇಶದಲ್ಲಿ ಭಯೋತ್ಪಾದನೆಯಂತಹ ವಿಚಾರಗಳಿವೆ. ಆ ಬಗ್ಗೆ ಮೊದಲು ಗಮನಹರಿಸಿ ಸರಿಪಡಿಸಿಕೊಳ್ಳಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನಮ್ಮ ದರ್ಗಾ ಮೇಲೂ ಕೇಸರಿ ಬಟ್ಟೆ ಹಾಕುತ್ತೇವೆ. ಧ್ವಜದಲ್ಲಿರುವ ಎಲ್ಲಾ ಬಣ್ಣಗಳು ಶಾಂತಿ ಪ್ರತೀಕ. ನಮ್ಮನ್ನು ನಿಮ್ಮ ಅಕ್ಕ, ತಂಗಿಯರ ರೀತಿ ನೋಡಿ ಎಂದು ಅವರು ಕೇಳಿಕೊಂಡಿದ್ದಾರೆ.