ಹಿಜಾಬ್ ವಿವಾದ: ತ್ವರಿತ ವಿಚಾರಣೆಗೆ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂಗೆ ಅರ್ಜಿ
ದೆಹಲಿ, ಫೆ.10: ಹಿಜಾಬ್ ವಿವಾದ ಕುರಿತು ಮಧ್ಯಪ್ರವೇಶ ಮಾಡಿ, ತ್ವರಿತ ವಿಚಾರಣೆ ನಡೆಸುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿಯ ಕುರಿತಾಗಿ ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಸದ್ಯ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ “ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ, ಅವರಿಗೆ ಅವಕಾಶ ನೀಡಿ, ಸಮಯ ಕೊಡಿ. ನಿನ್ನೆ ಅವರು ಉಲ್ಲೇಖಿಸಿದ್ದಾರೆ ಆದರೆ ಈಗ ನೀವು ಅರ್ಜಿಯನ್ನು ವರ್ಗಾಯಿಸಲು ಪ್ರಸ್ತಾಪಿಸುತ್ತಿದ್ದೀರಿ. ಕನಿಷ್ಠ ಒಂದು ದಿನವಾದರೂ ಕಾಯಿರಿ” ಎಂದು ತಿಳಿಸಿದೆ.
ಹಿಜಾಬ್ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ ಕಪಿಲ್ ಸಿಬಲ್ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ, ಕೆಲ ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟವೂ ನಡೆದಿದೆ.ಸುಪ್ರೀಂ ಕೋರ್ಟ್ ಈ ವಿಷಯವನ್ನು ತ್ವರಿತವಾಗಿ ಆಲಿಸಬೇಕು ಎಂದು ಹೇಳಿದ್ದರು. ಮೊದಲು ಹೈಕೋರ್ಟ್ ತೀರ್ಮಾನ ಮಾಡಲಿ. ಈ ವಿಚಾರದಲ್ಲಿ ಸದ್ಯಕ್ಕೆ ಆತುರವಿಲ್ಲ. ನಾವು ವಿಷಯವನ್ನು ಕೇಳಿದರೆ, ಹೈಕೋರ್ಟ್ ಕೇಳುವುದಿಲ್ಲ. ಪ್ರಸ್ತುತ, ಹಿಜಾಬ್ ಪ್ರಕರಣದಲ್ಲಿ ಯಾವುದೇ ದಿನಾಂಕವನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.