ಗೂಂಡಾ ಎಂದು ಕರೆದದ್ದಕ್ಕೆ ಬೇಸರ ಇಲ್ಲ, ಭಾರತದ ಆರ್ಥಿಕ ವ್ಯವಸ್ಥೆಗೆ ಹೊಡೆತ ಕೊಡುವುದು ಸಿಎಫ್’ಐ ಉದ್ದೇಶ- ಯಶ್ಪಾಲ್ ಸುವರ್ಣ
ಉಡುಪಿ ಫೆ.10: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒಂದು ದೇಶದ್ರೋಹಿ ಸಂಘಟನೆ ಎಂದು ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹಿಜಾಬ್ ಗೆ ಸಂಬಂಧಿಸಿ ಉಡುಪಿಯ ನಾಯಕರು ಹೇಳಿಕೆ ನೀಡಿಲ್ಲ. ಆದರೆ ಯಾರೋ ಪೇಯ್ಡ್ ನಾಯಕರು ಹೇಳಿಕೆ ನೀಡಿದ್ದಾರೆ. ಸಿಎಫ್ ಐ ಒಂದು ದೇಶದ್ರೋಹಿ ಸಂಘಟನೆ. ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ತನ್ನನ್ನು ಗೂಂಡಾ ಎಂದು ಕರೆದದ್ದಕ್ಕೆ ಬೇಸರ ಇಲ್ಲ ಎಂದ ಅವರು, ಗಲಭೆ ಮಾಡಿ ಭಾರತದ ಆರ್ಥಿಕ ವ್ಯವಸ್ಥೆಗೆ ಹೊಡೆತ ಕೊಡುವುದು ಕ್ಯಾಂಪಸ್ ಫ್ರಂಟ್ ಉದ್ದೇಶ. ಅವರು ಮೊದಲು ತಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ನೀಡಲಿ. ಮಸೀದಿಗಳಿಗೆ ಪ್ರವೇಶ ಕುರಿತು ಹೋರಾಟ ಮಾಡಲಿ. ಅದು ಬಿಟ್ಟು ಶಿಕ್ಷಣ ಸಂಸ್ಥೆಗಳಲ್ಲಿ ಹಕ್ಕು ಕೊಡಿ ಎಂದು ಕೇಳುವ ಹಕ್ಕು ಅವರಿಗಿಲ್ಲ ಎಂದು ಹೇಳಿದ್ದಾರೆ.