| ಲಕ್ನೋ ಫೆ.9 : ರಾಜ್ಯದ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ರಾಜಕೀಯ ನಾಯಕರುಗಳ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿರುವ ಟ್ವೀಟ್ ಈಗ ಹೊಸದೊಂದು ವಿವಾದವನ್ನು ಸೃಷ್ಟಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆಯಾಗುತ್ತಿರುವಾಗಲೇ ಟ್ವೀಟ್ ಮಾಡಿರುವ ಪ್ರಿಯಾಂಕಾ ವಾದ್ರಾ “ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಆಯ್ಕೆ ಹಾಗೂ ವಿವೇಚನೆಗೆ ಸಂಬಂಧಪಟ್ಟಿದ್ದು ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಅವರು ಬಿಕಿನಿಯಾದರೂ ಧರಿಸಲಿ, ಮುಸುಕಾದರೂ ಹಾಕಲಿ, ಜೀನ್ಸ್ ಆದರೂ ಧರಿಸಲಿ ಅಥವಾ ಹಿಜಾಬಾದರೂ ತೊಡಲಿ. ಅದು ಹೆಣ್ಣು ಮಕ್ಕಳ ಹಕ್ಕು. ಯಾವುದನ್ನು ಧರಿಸಬೇಕೆಂಬುದನ್ನು ಅವಳೇ ನಿರ್ಧರಿಸುತ್ತಾಳೆ. ಭಾರತದ ಸಂವಿಧಾನ ಅವಳಿಗೆ ಆ ಹಕ್ಕನ್ನು ನೀಡಿದೆ. ಕಿರುಕುಳ ನಿಲ್ಲಿಸಿʼʼ ಎಂದು ಟ್ವೀಟ್ ಮಾಡಿದ್ದಾರೆ.
ಇದೀಗ ಇವರ ಈ ಟ್ವೀಟ್ ಗೆ ತಿರುಗೇಟು ನೀಡಿರುವ ಬಿಜೆಪಿ, ಹಿಜಾಬ್ ಸಂಚಿನ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಾ ಲಭಿಸಿದೆ. ಹಿಜಾಬ್ ಜತೆಗೆ ಬಿಕಿನಿ ಪರ ಪ್ರಿಯಾಂಕಾ ವಾದ ಮಾಡಿದ್ದಾರೆ. ಆದರೆ ಇಲ್ಲಿರುವುದು ನಮ್ಮ ಧಿರಿಸಿನ ಪ್ರಶ್ನೆ ಅಲ್ಲ, ಶಾಲೆಯಲ್ಲಿ ಸಮವಸ್ತ್ರ ಧರಿಸುವ ಪ್ರಶ್ನೆ ಮಾತ್ರ ಎಂದು ತಿರುಗೇಟು ನೀಡಿದೆ. | |