ಸ್ನಾಪ್‌ ಡೀಲ್’ನಲ್ಲಿ ಟೀ ಕಪ್ ಆರ್ಡರ್ ಮಾಡಿ 45 ಸಾವಿರ ರೂ. ಕಳಕೊಂಡ ವ್ಯಕ್ತಿ

ಮಂಗಳೂರು, ಫೆ.9: ಆನ್ಲೈನ್ ವಂಚನೆ ಪ್ರಕರಣಕ್ಕೆ ಕಡಿವಾಣ ಹಾಕಲು ಸೈಬರ್ ಕ್ರೈಮ್ ಇಲಾಖೆ ಪೊಲೀಸರು ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಳುತ್ತಿದ್ದರೂ ವಂಚನೆಯಜಾಲ ತನ್ನ ಕೃತ್ಯಗಳಲ್ಲಿ ಸಕ್ರಿಯವಾಗಿಯೇ ಇದೆ. 

ಇದೇ ರೀತಿ ಮಂಗಳೂರಿನಲ್ಲಿ ಆನ್ಲೈನ್ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು 45,000 ಕಳೆದುಕೊಂಡಿದ್ದಾರೆ.
ನಗರದ ಮರೋಳಿಯ ಬ್ಯಾಂಕ್‌ವೊಂದರಲ್ಲಿ ಖಾತೆ ಹೊಂದಿರುವ ವ್ಯಕ್ತಿಯು ಸ್ನಾಪ್‌ ಡೀಲ್ ಆನ್‌ಲೈನ್ ಆ್ಯಪ್‌ನಲ್ಲಿ ಟೀಕಪ್ ವೊಂದನ್ನು ಆರ್ಡರ್ ಮಾಡಿದ್ದರು. ಅವರಿಗೆ ಫೆ.8ರಂದು ಅಪರಿಚಿತ ವ್ಯಕ್ತಿಯೋರ್ವನು 8327710873 ಸಂಖ್ಯೆಯಿಂದ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಲಾರಂಭಿಸಿದ್ದಾನೆ. ಹಾಗೂ ಎರಡು ಲಿಂಕ್‌ಗಳನ್ನು ಕಳುಹಿಸಿ ಕರೆಯನ್ನು ಹೋಲ್ಡ್‌ನಲ್ಲಿಟ್ಟು ಲಿಂಕ್‌ಗಳ ಮೂಲಕ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ಮತ್ತು ಒಟಿಪಿ ವಿವರಗಳನ್ನು ಪಡೆದುಕೊಂಡಿದ್ದಾರೆ.

ಇವರೂ ಟೀ ಕಪ್ ಆರ್ಡರ್ ಮಾಡಿದ ಹಿನ್ನೆಲೆಯಲ್ಲಿ ಕರೆ ಬಂದಿರಬಹುದು ಎಂದು ಅಂದಾಜಿಸಿ ಕರೆ ಮಾಡಿದ ವ್ಯಕ್ತಿ ಕೇಳಿದ ವಿವರಗಳನ್ನು ನೀಡಿದ್ದಾರೆ. ಆ ಬಳಿಕ ಕೆಲ ಸಮಯದಲ್ಲೇ ಅವರ ಖಾತೆಯಿಂದ ಹಂತಹಂತವಾಗಿ 45,000 ರೂ. ಹಣ ವರ್ಗಾವಣೆ ಗೊಂಡಿದ್ದು, ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಸೆನ್ ಅಪಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!