ಉಡುಪಿ: ಬೈಕ್ ಕಳವು
ಉಡುಪಿ ಫೆ.9 (ಉಡುಪಿ ಟೈಮ್ಸ್ ವರದಿ): ನಗರದ ಸರ್ವಿಸ್ ಬಸ್ ನಿಲ್ದಾಣದ ಸಮೀಪ ನಿಲ್ಲಿಸಿದ್ದ ಬೈಕ್ ಕಳವುಗೈದಿರುವ ಬಗ್ಗೆ ಉಡುಪಿ ನಗರ ಠಾಣೆಗೆ ಪ್ರಥಮ್ ಆರ್ ಆಚಾರ್ಯ ಎಂಬವರು ದೂರು ನೀಡಿದ್ದಾರೆ.
ನಿಟ್ಟೂರಿನ ಪ್ರಥಮ್ ಅವರು ಫೆ.6 ರಂದು ಬೆಳಿಗ್ಗೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಕಿದಿಯೂರು ಹೋಟೆಲ್ ಕಡೆ ಹೋಗುವ ರಸ್ತೆಯ ಎಡ ಬದಿ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಬೈಕ್ ನಿಲ್ಲಿಸಿ ಬಂಟ್ವಾಳಕ್ಕೆ ತೆರಳಿದ್ದರು. ಬಳಿಕ ವಾಪಾಸು ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ. ಅದರಂತೆ ಕಳ್ಳರು ನಿಲ್ಲಿಸಿದ ಬೈಕ್ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬೈಕ್ ನ ಮೌಲ್ಯ ರೂ.12,000 ಆಗಿರುತ್ತದೆ ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.