ಹಿಜಾಬ್ ವಿವಾದ: ವಿಚಾರಣೆ ನಾಳೆಗೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಏಕಸದಸ್ಯ ಪೀಠ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಹಿಜಾಬ್ ಧರಿಸಲು ಅವಕಾಶ ಕಲ್ಪಿಸುವಂತೆ ಕೋರಿರುವ ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡಿಸಿದರೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿದರು. ಇಂದು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ಇದರಂತೆ ಹಿಜಾಬ್ ಪರ ವಾದ ಮಂಡನೆ ಮಾಡಿದ ಹಿರಿಯ ದೇವದತ್ತ ಕಾಮತ್ ಅವರು, ಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಭಾಗವಾಗಿದೆ. ಪವಿತ್ರ ಕುರಾನ್ ಸೂಚಿಸಿದಂತೆ ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಮದ್ರಾಸ್, ಬಾಂಬೆ ಮತ್ತು ಕೇರಳ ಕೋರ್ಟ್ಗಳು ಇಂಥಹ ಸಮಸ್ಯೆಯನ್ನು ನಿಭಾಯಿಸುವುದಿಲ್ಲ. ಹಿಜಾಬ್ ಧರಿಸುವುದು ಸಂವಿಧಾನ ಆರ್ಟಿಕಲ್ 19(1)(ಎ) ಮತ್ತು ಆರ್ಟಿಕಲ್ 19(6) ಅಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಿಂದ ರಕ್ಷಿಸಲ್ಪಟ್ಟಿದೆ. ಹಿಜಾಬ್ ಧರಿಸುವುದು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಅಂಶವಾಗಿದೆ. ಇದನ್ನು ಸಂವಿಧಾನ 21ನೇ ವಿಧಿಯಲ್ಲಿ ಈ ಮೂಲಕ ಖಾಸಗಿತನವನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಅಲ್ಲದೆ, ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಜಾತ್ಯಾತೀತ ಭಾವನೆ ಒಂದು ಧರ್ಮಕ್ಕೆ ಯಾವುದು ಮೂಲಭೂತ ಎಂದು ಹೇಳಲು ಆಗಲ್ಲ. ವಯಸ್ಕಳಾದ ಬಳಿಕ ಅಪರಿಚಿತರಿಗೆ ಮುಖ ಮತ್ತು ಕೈ ತೋರಿಸುವಂತಿಲ್ಲ ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ಅದಕ್ಕೆ ಹಿಜಾಬ್ ಧರಿಸೋದು. ಇದು ಸಹ ನಮ್ಮ ಮೂಲಭೂತ ಹಕ್ಕು. ಮುಖ ಬಿಟ್ಟು ದೇಹ ತೋರಿಸೋದು ನಿಷಿದ್ಧ. ಹಿಜಾಬ್ ಮೂಲಭೂತ ಹಕ್ಕು ಎಂದು ಕೇರಳ ಹೈಕೋರ್ಟ್ ಹೇಳಿದೆ. ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. ಸಿಬಿಎಸ್ ಇ ಸಹ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಹಾಗಾಗಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದರು.
ಬಳಿಕ ನ್ಯಾಯಾಲಯವು ನಾವು ಬುರ್ಖಾ ಬಗ್ಗೆ ಮಾತನಾಡುತ್ತಿಲ್ಲ. ಹಿಜಾಬ್ ಧರಿಸೋದು ಮೂಲಭೂತ ಹಕ್ಕು. ಹಿಜಾಬ್ ಧರಿಸೋದು ಖಾಸಗೀತನದ ಹಕ್ಕು ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸರ್ಕಾರ ಆದೇಶ ವ್ಯಾಪ್ತಿಗೆ ಮೀರಿದ್ದು. ವಸ್ತ್ರ ಸಂಹಿತೆ ಸಂಬಂಧ ಸರ್ಕಾರ ಸ್ಪಷ್ಟವಾದ ಆದೇಶವನ್ನು ನೀಡಿಲ್ಲ. ಇಲ್ಲಿಯವರೆಗೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಅಭಿಪ್ರಾಯ ವ್ಯಕ್ತಪಡಿಸಿತು.
ಈ ವೇಳೆ ನ್ಯಾಯಾಧೀಶರು ಖುರಾನ್ ಪ್ರತಿಯನ್ನು ತರಿಸಿಕೊಂಡು ಗಮನಿಸಿದರು. ಖುರಾನ್ ನಲ್ಲಿ ಮಹಿಳೆಯರು ಧರಿಸಿರುವ ಉಡುಪಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಖುರಾನ್ ನಲ್ಲಿಯೇ ಎಲ್ಲವೂ ಮೂಲಭೂತ ಆಚರಣೆಗಳೇನಾ? ಇವುಗಳ ವ್ಯಾಪ್ತಿ ಏನು? ಹಿಜಾಬ್ ಬಗ್ಗೆ ಖುರಾನ್ ನಲ್ಲಿರುವ ಮಾಹಿತಿ ಓದಿ ಎಂದು ವಕೀಲರಿಗೆ ಸೂಚಿಸಿದರು.
ಸರ್ಕಾರಗಳು ಆದೇಶ ಹೊರಡಿಸಬಹುದು. ನಾಗರೀಕರು ಪ್ರಶ್ನೆ ಮಾಡಹುದು. ಆದೇಶವನ್ನು ನೀಡುವಂತಿಲ್ಲ ಎಂದು ಹೇಳುವಂತಿಲ್ಲ. ಸರ್ಕಾರ ಸಂವಿಧಾನದ ಒಂದು ಭಾಗ. ಸರ್ಕಾರಗಳ ಊಹೆಗಳ ಮೇಲೆ ನಿರ್ಧಾರಕ್ಕೆ ಬರಲು ಅಗಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ವೇಳೆ ಕೇರಳ ಹೈಕೋರ್ಟ್ ಮುಂದಿಟ್ಟ ನ್ಯಾಯಾಲಯ ಕೈ ಮತ್ತು ಮುಖ ಅಪರಿಚಿತರಿಗೆ ತೋರಿಸಬಹುದು ಎಂದು ಹೇಳಿದೆಯಲ್ಲ. ಹಾಗಾದ್ರೆ ಹಿಜಾಬ್ ಯಾಕೆ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನೆ ಮಾಡಿದರು..
ಸದ್ಯ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ವಿವಾದದ ವಿಚಾರಣೆ ಇನ್ನೂ ಸುಧೀರ್ಘ ಕಾಲನಡೆಯುವ ಸಾಧ್ಯತೆ ಇರುವುದರಿಂದ, ಹೈಕೋರ್ಟ್ ಮಧ್ಯಾಂತರ ಆದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರಕರಣದ ತೀರ್ಪಿ ನತ್ತ ಎಲ್ಲರ ಗಮನ ನೆಟ್ಟಿದೆ. ಹಾಗಾಗಿ ವಿಚಾರಣೆ ಮುಗಿದು ಹೈಕೋರ್ಟ್ ನೀಡಲಿರುವ ತೀರ್ಪಿಗಾಗಿ ರಾಜ್ಯವೇ ಎದುರು ನೋಡುತ್ತಿದೆ ಹಾಗಾಗಿ ಇದೊಂದು ಐತಿಹಾಸಿಕ ತೀರ್ಪಾಗುವ ಸಾಧ್ಯತೆಯಿದೆ.