ಜುಲೈ 2021ರವರೆಗೂ ಮನೆಯಿಂದಲೇ ಕೆಲಸ ಮಾಡಿ: ಉದ್ಯೋಗಿಗಳಿಗೆ ಗೂಗಲ್ ನಿರ್ದೇಶನ
ವಿಶ್ವದ ಅತ್ಯಂತ ವಿಶ್ವಾಸಾರ್ಹ ಇಂಟರ್ನೆಟ್ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ತನ್ನ 200,000 ಉದ್ಯೋಗಿಗಳು ಮತ್ತು ಗುತ್ತಿಗೆದಾರರು 2021 ಜೂನ್ ವರೆವಿಗೂ ಮನೆಯಿಂದ ಕೆಲಸ ಮಾಡಬೇಕೆಂದು ನಿರ್ದೇಶಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದ ತಮ್ಮ ಸಂಸ್ಥೆಯ ಉದ್ಯೋಗಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಮಹತ್ವದ ತೀರ್ಮಾನಕ್ಕೆ ಬಂದಿದೆ.
ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಹೊರಡಿಸಿದ ರಿಮೋಟ್-ವರ್ಕ್ ಆದೇಶವು ಗೂಗಲ್‌ನ ಕಾರ್ಪೊರೇಟ್ ಪೋಷಕ ಆಲ್ಫಾಬೆಟ್ ಇಂಕ್ ಒಡೆತನದ ಇತರ ಕಂಪನಿಗಳಿಗೂ ಅನ್ವಯಿಸಲಿದೆ. ಈ ವರ್ಷಉಳಿದ ದಿನಗಳಲ್ಲಿ ತನ್ನ ಹೆಚ್ಚಿನ ಕಚೇರಿಗಳನ್ನು ಮುಚ್ಚುವ ಗೂಗಲ್‌ನ ಹಿಂದಿನ ಯೋಜನೆಗೆ ಆರು ತಿಂಗಳ ವಿಸ್ತರಣೆ ಮಾಡಲಾಗಿದೆ.
“ಈ ವಿಸ್ತೃತ ಟೈಮ್‌ಲೈನ್ ಗೆ ಮಿಶ್ರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ. ಆದರೆ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ”ಆಲ್ಫಾಬೆಟ್‌ನ ಸಿಇಒ ಆಗಿರುವ ಪಿಚೈ ಉದ್ಯೋಗಿಗಳಿಗೆ ಬರೆದ ಈ ಮೇಲ್ ನಲ್ಲಿ ಹೇಳಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್. ಪಿಚೈ ಅವರ ಈ ನಿರ್ಧಾರವನ್ನು ಮೊದಲು ಪ್ರಕಟ ಮಾಡಿದೆ.
ಗೂಗಲ್‌ನ ಕಚೇರಿಗಳ ದೀರ್ಘಕಾಲದ ಲಾಕ್‌ಡೌನ್ ಇತರ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಿಗೂ ದೇ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಬಹುದು. ಕೊರೋನಾವೈರಸ್ ಹರಡುವಿಕೆಯಿಂದ ಪ್ರಚೋದಿಸಲ್ಪಟ್ಟ ವರ್ಕ್ ಫ್ರಂ ಜೋಮ್ ಕೆಲಸದಲ್ಲಿ ಐಟಿ ಉದ್ಯಮ(ತಂತ್ರಜ್ಞಾನ ಉದ್ಯಮ) ಮುಂಚೂಣಿಯಲ್ಲಿದೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವನ್ನು ಘೋಷಿಸುವ ಮೊದಲೇ ಗೂಗಲ್ ಮತ್ತು ಇತರ ಹಲವು ಪ್ರಮುಖ ತಾಂತ್ರಿಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಲು ತೀರ್ಮಾನಿಸಿದ್ದವು.