ತಾಕತ್ತಿದ್ದರೆ ನಾನು ಹಿಜಾಬ್ ಧರಿಸಿ ಬಂದಾಗ ವಿಧಾನಸೌಧದೊಳಗೆ ತಡೆಯಲಿ ನೋಡೋಣ: ಶಾಸಕಿ ಕನೀಝ್ ಫಾತಿಮ ಸವಾಲು
ಬೆಳಗಾವಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭಾಗಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಅಡ್ಡಿಪಡಿಸುವ ಕಾಲೇಜು ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರ ವಿರುದ್ಧ ಹರಿಹಾಯ್ದಿರುವ ಶಾಸಕಿ ಕನೀಝ್ ಫಾತಿಮಾ, ಸಾಧ್ಯವಾದರೆ ವಿಧಾನ ಸೌಧದೊಳಗೆ ತಾವು ಹಿಜಾಬ್ ಧರಿಸಿಕೊಂಡು ಹೋಗುವುದನ್ನು ತಡೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಹಿಜಾಬ್ ಧರಿಸುವುದನ್ನು ತಡೆಯುವುದು, ಹಲವು ಕೋಮುಸೌಹಾರ್ದ ಕೆಡಿಸುವ ವಿಷಯಗಳು ರಾಜ್ಯದಲ್ಲಿ ಹೊಸ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿವೆ. ಹಿಂದಿನ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲ ಎಂದು ಆರೋಪಿಸಿದ್ದಾರೆ.
ಶಾಸಕಿಯಾದ ನಾನು ಕೂಡ ಹಿಜಾಬ್ ಧರಿಸಿ ವಿಧಾನಸಭೆಯೊಳಗೆ ಕುಳಿತುಕೊಳ್ಳುತ್ತೇನೆ. ಯಾರಿಗಾದರೂ ತಾಕತ್ತಿದ್ದರೆ ನನ್ನನ್ನು ವಿಧಾನಸೌಧ ಪ್ರವೇಶಿಸುವುದನ್ನು ತಡೆಯಲಿ ನೋಡೋಣ. ಹಿಜಾಬ್ ಅಥವಾ ಬುರ್ಖಾ ಧರಿಸುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ, ಬಟ್ಟೆ ಧರಿಸುವ ಹಕ್ಕು ವೈಯಕ್ತಿಕ. ನಮ್ಮ ಸಂಸ್ಕೃತಿಯಲ್ಲಿ ಹಿಜಾಬ್ ಧರಿಸುವ ಸಂಪ್ರದಾಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಹಿಜಾಬ್ ಅಥವಾ ಬುರ್ಖಾ ಧರಿಸುವ ವಿದ್ಯಾರ್ಥಿನಿಯರಿಗೆ ತಮ್ಮ ಬೆಂಬಲ ಸೂಚಿಸಿರುವ ಅವರು, ಸಾಂಪ್ರದಾಯಿಕ ಧಿರಿಸು ಧರಿಸುವುದನ್ನು ತಡೆಯುವ ಜನರಿಂದ ವಿದ್ಯಾರ್ಥಿಗಳನ್ನು ಕಾಪಾಡುವ ಭರವಸೆಯನ್ನು ನೀಡಿದ್ದಾರೆ. ನಮ್ಮದು ಸ್ವತಂತ್ರ ದೇಶ, ದೇಶದ ಸಂವಿಧಾನ ನಮಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಕಾಪಾಡುವ ಹಕ್ಕುಗಳನ್ನು ನೀಡಿದೆ. ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ನೀಡಿದ್ದಾರೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳುತ್ತಾರೆ.
ಧರ್ಮದ ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ವಾದ-ವಿವಾದಗಳ ಬಗ್ಗೆ ಮಾತನಾಡಿರುವ ಶಾಸಕಿ, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಆಗುತ್ತಿವೆ. ತಮ್ಮ ಕಾರ್ಯಕರ್ತರ ತಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಂಬಂಧಪಟ್ಟವರನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಲಿದೆ ಎಂದು ಹೇಳಿದ್ದಾರೆ.
ವಿಧಾನಸೌಧ ಹೋಗೋದಕ್ಕೆ ಯಾವುದೇ ಸಮವಸ್ತ್ರದ ಅವಶ್ಯಕತೆ ಇಲ್ಲ… ಶಾಲಾ ಕಾಲೇಜುಗಳಿಗೆ ಹಾಗಲ್ಲ ಅಲ್ವಾ???
ಇದನ್ನ ಅರ್ಥಮಾಡಿಕೊಂಡು ಮಾತನಾಡುವುದು ಒಳಿತು ಮಾನ್ಯ ಶಾಸಕಿ ಫಾತಿಮಾ ಅವರೇ
Stupid statement.. not matching with the issue.
Madam tappu heltha eddere.. school college rules follow madbeku…nev yavdu vishaya heli problem madthire…yake students study madle… distrub madbedi….olle reeti education madle…. hindu muslim others..3llaru school nalli onde…
ರೂಲ್ಸ್ ಇದ್ದರೆ ಪಾಲಿಸಲೇಬೇಕು