ಭಾತೃತ್ವದ ಸಂದೇಶ ಸಾರುವ ಈದ್-ಉಲ್-ಫಿತರ್: ಎಂ.ಎ.ಗಫೂರ್

ಭಾತೃತ್ವದ ಸಂದೇಶ ಬಿತ್ತುವ ಈದ್-ಉಲ್-ಫಿತರ್ ಜಗತ್ತಿನ ಮುಸ್ಲಿಮರು ಒಂದು ತಿಂಗಳು ಕಠಿಣ ಉಪವಾಸ ವ್ರತ ಆಚರಿಸಿದ ನಂತರ ಸಮಾರೋಪ ಎಂಬಂತೆ ಶವ್ವಾಲ್ ತಿಂಗಳ ಪ್ರಾರಂಭದಂದು ಈದ್-ಉಲ್-ಫಿತರ್ ಆಚರಿಸುತ್ತಾರೆ.
ಪರಸ್ಪರ ಸಡಗರ ಸಂತೋಷ ಹಂಚಿಕೊಳ್ಳಲು ಹಬ್ಬಗಳು ಪೂರಕ. ಜನರನ್ನು ಬೆಸೆಯುವ ಬಂದವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದತೆ, ಸೋದರತೆಯ ಭರವಸೆ ಇಮ್ಮಡಿಗೊಳಿಸೂದರ ಜೊತೆಗೆ ಕಷ್ಟ, ಸುಖ, ದುಃಖ, ದುಮ್ಮಾನಕ್ಕೆ ಆತ್ಮವಿಶ್ವಾಸ ಮೂಡಿಸುತ್ತದೆ. ಎಲ್ಲರನ್ನೂ ಒಂದು ಗೂಡಿಸುವ ಹಬ್ಬಗಳಿಗೆ ತನ್ನದೇ ಹಿನ್ನಲೆ ಇರುತ್ತದೆ. ಜಗತ್ತಿನ ಮುಸ್ಲಿಮರು ಆಚರಿಸುವ ಈ ಈದ್-ಉಲ್-ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ.

ಆದರೆ ಇಂದು ಜಗತ್ತಿನಲ್ಲಿ ಕೋವಿಡ್-೧೯ ನಿಂದಾದ ಆಘಾತದಿಂದಾಗಿ ಜಗತ್ತಿನ ಎಲ್ಲರೂ ನೋವಿನಲ್ಲಿರುವಾಗ ಸರಳವಾಗಿ ಹಬ್ಬವನ್ನು ಆಚರಿಸಬೇಕಾಗಿದೆ ಎಂಬ ಸಂದೇಶವನ್ನು ಧಾರ್ಮಿಕ ನಾಯಕರು ರವಾನಿಸಿದ್ದಾರೆ.   ಹಜರತ್ ಉಮರ್ (ರ.ಆ) ರವರ ಆಡಳಿತಕಾಲದಲ್ಲಿ “ತಾವೂನ್” ಎಂಬ “ವಭಾ”(ಸಾಂಕ್ರಾಮಿಕ ಕಾಯಿಲೆ) ಬಂದಾಗ ಅವರು ಅವರ ಅನುಯಾಯಿಗಳಿಗೆ  ಪ್ರವಾದಿ ಮುಹಮ್ಮ್‌ದ್ (ಸ.ಆ) ರವರ ಸಂದೇಶ ಇಂದಿನ ಲಾಕ್ ಡೌನ್ ರೀತಿಯಲ್ಲೇ ಅಲ್ಲಿದ್ದವರು ಅಲ್ಲೇ ಇರಿ, ಪ್ರವಾಸ ಗಳನ್ನು ಕೈಗೊಳ್ಳಬೇಡಿ, ರೋಗಿಗಳಿಗೆ ಗುಣಮುಖರಾಗಲು ಪ್ರಾರ್ಥಿಸಿರಿ ಎಂದು ಹೇಳಿದ್ದರು ಎಂದು ಹದೀಸ್‌ಗಳಲ್ಲಿ ಉಲ್ಲೇಖಿಸಲಾಗಿದೆ.   *ಫಿತ್ರ್ ಝಕಾತ್*  ಫಿತ್ರ್ ಝಕಾತ್ ಎಂಬ ದಾನ ವಿತರಿಸುವುದು ಕಡ್ಡಾಯ ಮತ್ತು ರಂಝಾನ್ ಹಬ್ಬದ ವೈಶಿಷ್ಟ್ಯ.

ಬಡವರಿಗೆ, ಹಸಿವಿನವರಿಗೆ ಹಸಿವು ನೀಗಿಸುವ ಸಂಕೇತವೂ ಇದರಲ್ಲಿ ಅಡಗಿದೆ. ಬದುಕಿರುವ ಜೀವಿಗಳ ಪ್ರತಿ ಒಬ್ಬ ವ್ಯಕ್ತಿಗೆ ನಿರ್ದಿಷ್ಟ ಪ್ರಮಾಣದ ಫಿತ್ರ್ ಝಕಾತ್ ಕಡ್ಡಾಯ ವಾಗಿದ್ದು ಇದನ್ನು ಕಡುಬಡವರಿಗೆ ಈದ್-ಉಲ್-ಫಿತರ್ ನಮಾಝಿಗೆ ಹೋಗುವ ಮೊದಲು ದಾನ ಮಾಡಬೇಕಾಗಿದೆ. ಉಪವಾಸ ತಿಂಗಳಲ್ಲಿ ಪ್ರತಿ ದಿನ ಬೆಳಿಗೆ ಸುಮಾರು ೪:೩೦ ರಿಂದ ಸೂರ್ಯಾಸ್ತವರೆಗೂ ಅನ್ನಾ ಆಹಾರಗಳನ್ನು ತ್ಯಜಿಸಿ, ಕೆಡುಕುಗಳಿಂದ ದೂರ ಉಳಿದುಕುರಾನ್ ಪಠಣ, ನಮಾಝಗಳು, ತರಾವೀಹ್, ಝಿಕರ್ ಸ್ವಲಾತ್ ಮೂಲಕ ಅಲ್ಲಾಹುವಿಗೆ ಅರ್ಪಿಸುವುದು ವ್ರತದ ಸಂದರ್ಭದಲ್ಲಿ ಆದ ಪ್ರಮಾದಗಳಿಗೆ ಫಿತ್ರ್ ಜ಼ಕಾತ್ ನೀಡುವುದಾಗಿದೆ. ಸಮಾಜದಲ್ಲಿ ಇಂದು ಕೆಲವೊಂದು ಮುಸ್ಲಿಂ ಸಂಘಟನೆಗಳು ಝಕಾತ್, ಪಿತ್ರಾಹಗಳನ್ನು ಸಂಗ್ರಹಿಸಿ ಬಡವರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಇದೆ. ಸಂಪತ್ತಿನ ಕೇಂದ್ರೀ ಕರಣವನ್ನು ಇಸ್ಲಾಂ ವಿರೋಧಿಸುತ್ತದೆ.

ಶ್ರೀಮಂತನನ್ನು ದಾನ ಮಾಡುವುದಕ್ಕೆ ಪ್ರೇರಿಪಿಸುತ್ತದೆ. ಇಸ್ಲಾಮಿನ ೫ ಪ್ರಧಾನ ಕರ್ಮಗಳಲ್ಲಿ ಒಂದಾಗಿದೆ ಜ಼ಕಾತ್.   *ಆಲಿಂಗನ/ಹಸ್ಥಲಾಗನ* ಈದ್ ದಿನದಂದು ಆಲಿಂಗನ ಹಸ್ಥಲಾಗನ, ಕೀರ್(ಸಿಹಿ ತಿಂಡಿ) ತಿನಿಸುವುದು, ಮಾಂಸಾಹಾರ ಸೇವಿಸುವುದು ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವುದು ಇತ್ಯಾದಿ ಪ್ರಮುಖ ವಾಗಿರುತ್ತದೆ. ಆ ಮೂಲಕ ಪರಸ್ಪರ್ ಸ್ನೇಹ ಸಂಭಂಧ ವ್ರದ್ಧಿಸುವುದರೊಂದಿಗೆ ಸಂತೂಷ ಪಡುವುದು. ಆದರೆ ಇಂದು ಆಧುನಿಖಾ ಸಮಾಜಿನಲ್ಲಿ ಮೊಬೈಲ್, ಟ್ವಿಯರ್, ಫಸೆಬೂಕ್, ಇನ್ಸ್ಟಗ್ರಾಂ, ವಿದೆಗಳ ಮೂಲಕ ನಮ್ಮ ಪ್ರೀತಿಯನ್ನು ಸಮುದಾಯದವರೊಂದಿಗೆ ಮತ್ತು ಸಮಾಜದವರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಅತಿವೇಗದಲ್ಲಿ ಹರಡುತ್ತಿರುವ ಕೊರೋಣವನ್ನು ನಿಯಂತ್ರಿಸಲು ಬದಲಾದ ದಿನಚರಿಯಲ್ಲಿ ಸಾಮಾಜಿಕ ಅಂತರ ಕಾಯಿದುಕೊಂಡು ಅನಗತ್ಯ ಮನೆಯಿಂದ ಹೊರಗೆ ಹೋಗದೆ ಸರಕಾರದ ಆದೇಶಗಳನ್ನು ಪಾಲಿಸುತ್ತಾ ಉಪವಾಸದ ವ್ರತಾಚರಣೆ ಎಲ್ಲ ಆರಾಧನೆಗಳನ್ನು(ನಮಾಜ್, ಜುಮ್ಮಾ ನಮಾಜ್, ತರಾವೀಃ, ಇತ್ಯಾದಿ) ಮನೆಯಲ್ಲಿಯೇ ನಿರ್ವಹಿಸಿ ಸಂಯಮವನ್ನು ಮುಸ್ಲಿಂ ಸಮಾಜ ಪ್ರದರ್ಶಿಸಿದೆ.   ಇಂಡಿ ಈದ್-ಉಲ್-ಫಿತರ್(ಅಲ್ಲಾಹೂನಿಗೆ ಕ್ರತಜ್ಯಾತೆ ಸಲ್ಲಿಸುವುದು) ರಾಮಜ಼ಾನ್ ತಿಂಗಳಲ್ಲಿ ಪ್ರದರ್ಶಿಸಿದ ತ್ಯಾಗ ಸಂಯಮ ಇಂದು ಮನೆ ಮಂದಿಯೊಂದಿಗೆ ಸಂಭ್ರಮಿಸಿ ಮನೆಯಲ್ಲಿಯೇ ಆಚರಿಸಿ ಸಮಾಜದ ಮತ್ತು ಸಮುದಾಯದ ನಮ್ಮೆಲ್ಲರ ಕರ್ತವ್ಯವಾಗಿದೆ. ರೋಗಿಗಳಿಗೆ ಕೋವಿಡ್ ವಾರೀಯರ್ಸ್ ಗಳಿಗೆ ವೈಧ್ಯಕೀಯ ಸಿಬ್ಭಂಧಿಗಳಿಗೆ ಪೊಲಿಸೆರಿಗೆ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು.    _________________________

ನಿಮ್ಮಲ್ಲಿ ಯಾರಿಗಾದರೂ ಮರಣ ಬರುವ ಮುನ್ನ ನಾವು ನಿಮಗೆಯೆನನ್ನು ನೀಡಿರುವೆನು ಅದರಿಂದ ಕರ್ಚು ಮಾಡಿರಿ(ಮರಣವು ಬಂದು ಬಿಟ್ಟಾಗ) ಅವನು “ನನ್ನೊಡೆಯಾ ನೀನು ನನಗೆ ಒಂದಷ್ಟು ಹೆಚ್ಚು ಕಾಲ ಅವಕಾಶವನ್ನೇಕೆ ಕೊಟಿಲ್ಲ? (ಕೊಟ್ಟಿದರೆ) ನಾನು ದಾನ ಧರ್ಮ ಮಾಡುತ್ತಿದ್ದೆ ಮತ್ತು ಸಜ್ಜನರ ಪಾಲಿಗೆ ಸೇರುತ್ತಿದ್ದೆ” ಎನ್ನುವನು.                                                             – ಕುರಾನ್ ಅದ್ಯಾಯ (63:10) 
_________________________________ 
*ಕುರಾನ್ ಸಂದೇಶ* ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಪರಸ್ಪರ ಪ್ರೀತಿ ವಿಶ್ವಾಸದ ಮೂಲಕ ಜಾಗತಿಕ ಮಟ್ಟದಲ್ಲಿ ಮನುಷ್ಯ-ಮನುಷ್ಯನ ನಡುವಿನ ಸಂಬಂಧ ವ್ರದ್ಧಿಗೆ ಪ್ರೇರಣೆಯಾಗಲು ಹಳಸಿದ ಸಂಬಂಧಗಳು ಮರು ಜೋಡಣೆಯಾಗಬೇಕಾಗಿದೆ. ಪ್ರೀತಿ, ವಿಶ್ವಾಸದ ಮೂಲಕ ಜಗತನ್ನೇ ಗೆದ್ದ ಪ್ರವಾದಿ ಮುಹಮ್ಮದ್(ಸ.ಆ) ಅವರ ಸಂದೇಶ ನಮಗೆಲ್ಲ ಮಾರ್ಗದರ್ಶನ ವಾಗಬೇಕಾಗಿದೆ.

    ಎಂ. ಎ. ಗಫೂರ್  ಮಾಜಿ ಅಧ್ಯಕ್ಷರು  ಕೆ ಎಂ ಡಿ ಸಿ ಕರ್ನಾಟಕ ಉಡುಪಿ

Leave a Reply

Your email address will not be published. Required fields are marked *

error: Content is protected !!