ಪ್ರಧಾನಿ ಸೇನೆ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ- ನ್ಯಾಯಾಲಯದಿಂದ ನೋಟೀಸ್
ನವದೆಹಲಿ, ಫೆ 03: ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರನ್ನು ಭೇಟಿ ಮಾಡುವಾಗ ಸೇನಾ ಸಮವಸ್ತ್ರ ಧರಿಸಿರುವುದಕ್ಕೆ ಜಿಲ್ಲಾ ನ್ಯಾಯಾಲಯವು ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿಯವರು ಸಮವಸ್ತ್ರ ಧರಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ಅದರಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 140 ರ ಅಡಿಯಲ್ಲಿ ಸೈನಿಕರು, ನಾವಿಕರು, ಏರ್‌ಮ್ಯಾನ್ ಧರಿಸುವ ಅಥವಾ ಬಳಸಿರುವ ವಸ್ತ್ರಗಳನ್ನು ಧರಿಸುವುದು ಅಥವಾ ಟೋಕನ್ ಅನ್ನು ಒಯ್ಯುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ಪ್ರಧಾನಿ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಭಾರತೀಯ ಸೇನಾ ಸಮವಸ್ತ್ರ ಧರಿಸಿ ಸೈನಿಕರನ್ನ ಭೇಟಿ ಮಾಡಿದ್ದರು. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಜಿಲ್ಲಾ ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಿದ್ದು, ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ.