ಕೊರೋನಾ ವೈರಸ್: ಯಶಸ್ಸು- ದಿಢೀರ್ ಕುಸಿತ, ಚೇತರಿಕೆ ಮಾರ್ಗದತ್ತ ಕರ್ನಾಟಕ?

ಬೆಂಗಳೂರು: ಲಾಕ್ಡೌನ್ ಸಡಿಲಗೊಂಡ ಬಳಿಕ ರಾಜ್ಯದಲ್ಲಿ ಹೆಮ್ಮಾರಿ ಕೊರೋನಾವೈರಸ್ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಈ ವರೆಗೂ ಒಟ್ಟು ಸೋಂಕಿತರ ಸಂಖಅಯೆ 96,141ಕ್ಕೆ ಏರಿಕೆಯಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಾಗುತ್ತಿರುವ ಕೆಲ ಬೆಳವಣಿಗೆಗಳು ಕರ್ನಾಟಕ ಚೇತರಿಸಿಕೊಳ್ಳುತ್ತಿರುವ ಸೂಚನೆಗಳನ್ನು ನೀಡುತ್ತಿದೆ. 

ಮಾರ್ಚ್ 8 ರಂದು ಮೊದಲ ಸೋಂಕು ಪ್ರಕರಣ ವರದಿಯಾಗಿತ್ತು. ಇದರಂತೆ ಕೊರೋನಾ ಸೋಂಕು ರಾಜ್ಯಕ್ಕೆ ಕಾಲಿಡುತ್ತಿದ್ದಂತೆಯೇ ರಾಜ್ಯ ಸರ್ಕಾರ ಲಾಕ್ಡೌನ್ ಹೇರಿ ಸೋಂಕು ಹರಡದಂತೆ ತಡೆಯಲು ದಿಟ್ಟ ಕ್ರಮಗಳನ್ನು ಕೈಗೊಂಡಿತ್ತು. ಇದರಿಂದ ಆರಂಭದಲ್ಲಿ ದೊಡ್ಡ ಮಟ್ಟದಲ್ಲಿ ಸೋಂಕು ಹರಡಿರಲಿಲ್ಲ. ಆದರೆ, ಲಾಕ್ಡೌನ್ ಸಡಿಲಗೊಂಡು ವ್ಯಾಪಾರ ವಹಿವಾಟುಗಳು ಆರಂಭವಾಗುತ್ತಿದಂತೆಯೇ ರಾಜ್ಯದಲ್ಲಿ ಕೊರೋನಾ ರೌದ್ರನರ್ತನ ಮೆರೆಯುತ್ತಿದೆ. ಕೇವಲ 140 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖಅಯೆ 96,141ಕ್ಕೆ ತಲುಪಿದೆ. 

ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವಲ್ಲೇ ರಾಜ್ಯ ಸರ್ಕಾರ ಕೂಡ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸೋಂಕಿನ ವಿರುದ್ಧ ಹೋರಾಡುವ ಸಲುವಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲು ಆರಂಭಿಸಿದೆ. ಅಲ್ಲದೆ. ಪರೀಕ್ಷೆಗಳ ಸಂಖ್ಯೆಯನ್ನೂ ಕೂಡ ಏರಿಕೆ ಮಾಡಿದ್ದು, ಈ ಮೂಲಕ ವೈರಸ್ ಮಟ್ಟಹಾಕುವ ಪ್ರಯತ್ನಗಳನ್ನು ಮಾಡುತ್ತದೆ. 

ರಾಜ್ಯದಲ್ಲಿ ಕೊರೋನಾ ಪರೀಕ್ಷೆ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡಲಾಗುತ್ತಿದ್ದು, ಪ್ರತೀನಿತ್ಯ 21,509 ಆರ್’ಟಿ-ಪಿಸಿಆರ್ ಮತ್ತು 11,256 ಇತರೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಇದರೊಂದಿಗೆ ರ್ಯಾಪಿಡ್ ಆ್ಯಂಟಿಜೆನ್ ಡಿಟೆಕ್ಷನ್ ಪರೀಕ್ಷೆಯನ್ನೂ ಕೂಡ ಸೇರ್ಪಡೆಗೊಳಿಸಲಾಗಿದ್ದು, ಒಟ್ಟಾರೆ ಪರೀಕ್ಷೆಗಳ ಸಂಖ್ಯೆ 11,43,262ಕ್ಕೆ ಏರಿಕೆಯಾಗಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಾದಂತೆ ಸೋಂಕಿತರನ್ನು ಶೀಘ್ರಗತಿಯಲ್ಲಿ ಪತ್ತೆ ಹಚ್ಚುವ ಕಾರ್ಯಗಳು ವೇಗಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 55,388 ಎಂದು ತಿಳಿದುಬಂದಿದೆ. 

ಸಕ್ರಿಯ ಪ್ರಕರಣಗಳ ಪ್ರಮಾಣವು ಜುಲೈ 5 ರಂದು ಶೇ 3.32 ರಿಂದ ಜುಲೈ 25 ರಂದು ಶೇ 7.95 ಕ್ಕೆ ತಲುಪಿದ್ದು, ಇದರೊಂದಿಗೆ ಚೇತರಿಕೆಯ ಪ್ರಮಾಣ ಕೂಡ ಸುಧಾರಣೆ ಕಂಡಿದೆ. 

ಜುಲೈ 21ರವರೆಗೂ ಗುಣಮುಖರಾಗುತ್ತಿರುವ ಪ್ರಮಾಣ ಸಾಕಷ್ಟು ಕುಸಿತ ಕಂಡಿದೆ. ಜುಲೈ 5 ಗುಣಮುಖರಾಗದವರ ಪ್ರಮಾಣ ಸೇ.41.94 ರಷ್ಟಿತ್ತು. ಈ ಪ್ರಮಾಣ ಜುಲೈ.20ರಂದು ಶೇ.35.29ಕ್ಕೆ ಕುಸಿದಿದ್ದು. ಜುಲೈ 21 ರಂದು ಶೇ.35.82, ಜುಲೈ.22 ಶೇ.35.91 ತಲುಪಿತ್ತು. ನಂತರ ಜುಲೈ.25 ರಂದು 37.11ಕ್ಕೆ ಬಂದು ನಿಂತಿದೆ. 

ಈ ನಡುವೆ ಕೊಂಚ ಸಮಾಧಾನಕರ ವಿಚಾರವೆಂದೆರ ರಾಜ್ಯದಲ್ಲಿ ಸೋಂಕಿನಿಂದ ಮೃತಪಡುತ್ತಿರುವವರ ಪ್ರಮಾಣ ಕಡಿಮೆಯಾಗಿದೆ. ಜುಲೈ ಮೊದಲ ವಾರದಲ್ಲಿ ಶೇ.1.80-1.90ರಷ್ಟಿದ್ದ ಸಾವಿನ ಪ್ರಮಾಣ ಜುಲೈ.20ರಂದು ಶೇ.2.08ಕ್ಕೆ ತಲುಪಿತ್ತು. ಎರಡು ದಿನಗಳ ಬಳಿಕ ಶೇ.2ಕ್ಕೆ ತಲುಪಿತ್ತು. ನಂತರ ಶೇ,1.99 ಮತ್ತೆ ಶೇ.2ರಷ್ಟಕ್ಕೆ ಮುಟ್ಟಿತ್ತು. ಜುಲ.25ಕ್ಕೆ ಶೇ.1.97ಕ್ಕೆ ಬಂದು ನಿಂತಿದೆ. 

Leave a Reply

Your email address will not be published. Required fields are marked *

error: Content is protected !!