ಕೊರೊನಾ ಅನ್‌ಲಾಕ್ 3 – ಯಾವುದು ಲಾಕ್? ಯಾವುದು ಅನ್‌ಲಾಕ್?
ನವದೆಹಲಿ: ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ವೇಳೆಯೇ ದೇಶದಲ್ಲಿ ಅನ್‍ಲಾಕ್ 2.0 ಮುಗಿಯುವ ಹಂತಕ್ಕೆ ಬಂದಿದೆ. ಜೂನ್‍ನಲ್ಲಿ ಪ್ರಾಂಭವಾದ ಅನ್‍ಲಾಕ್ ಪ್ರಕ್ರಿಯೆಯ 2ನೇ ಹಂತ ಮುಗಿಯಲು ಇನ್ನೈದು ದಿನ ಬಾಕಿ ಇದೆ.
ಆಗಸ್ಟ್ ಒಂದರಿಂದ 3ನೇ ಹಂತದ ಅನ್‍ಲಾಕ್ ನಿಯಮ ಜಾರಿಗೆ ಬರಬೇಕಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.
ಸೋಂಕು ಹೆಚ್ಚಳವಾಗ್ತಿದ್ರೂ ಆಗಸ್ಟ್‌ನಿಂದ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆಗಳಿವೆ. ಜೊತೆಗೆ ಹಲವು ನಿರ್ಬಂಧ ಮುಂದುವರಿಸುವ ಸಾಧ್ಯತೆಗಳಿವೆ.
ಯಾವುದು ಲಾಕ್? ಯಾವುದು ಅನ್‍ಲಾಕ್?
* ನೈಟ್ ಕರ್ಫ್ಯೂ ಸಮಯ ಇಳಿಕೆ ಮಾಡಬಹುದು
* ಥಿಯೇಟರ್ ಓಪನ್‍ಗೆ ಷರತ್ತುಬದ್ಧ ಅನುಮತಿ ಸಾಧ್ಯತೆ (ಶೇ.25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ)
* ಜಿಮ್‍ಗಳಿಗೆ ಷರತ್ತು ಬದ್ಧ ಅವಕಾಶ
* ಮೆಟ್ರೋ ರೈಲು, ಸ್ವಿಮಿಂಗ್ ಪೂಲ್ – ನಿರ್ಬಂಧ ಮುಂದುವರಿಕೆ
* ಶಾಲಾ-ಕಾಲೇಜುಗಳು ಸದ್ಯಕ್ಕೆ ತೆರೆಯುವ ಸಾಧ್ಯತೆ ತೀರಾ ಕಡಿಮೆ
* ಆಗಸ್ಟ್‌ನಲ್ಲಿ ಎಲ್ಲಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಾಧ್ಯತೆ
* ಶೈಕ್ಷಣಿಕ ಕೋಚಿಂಗ್ ಸೆಂಟರ್‌ಗಳಿಗೆ ಷರತ್ತು ಬದ್ಧ ಅನುಮತಿ
* ಪೂರ್ಣ ಪ್ರಮಾಣ ರೈಲು ಸಂಚಾರ ಸದ್ಯಕ್ಕೆ ಅನುಮಾನ (ವಿಶೇಷ ರೈಲುಗಳು ಯಥಾವತ್ತಾಗಿ ಸಂಚಾರ ಸಾಧ್ಯತೆ)
* ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ನಿರ್ದಿಷ್ಟ ದೇಶಗಳಿಗೆ ಹೋಗಿಬರಲು ಅವಕಾಶ ಸಾಧ್ಯತೆ
* ಮದುವೆ, ಶುಭ ಸಮಾರಂಭಗಳಿಗೆ ಈಗಿರುವ ಕಠಿಣ ನಿಯಮ ಮುಂದುವರಿಕೆ