ಉಡುಪಿ: ಕೊರೋನಾ ಸೋಂಕಿಗೆ ಇಬ್ಬರು ಬಲಿ
ಉಡುಪಿ: (ಉಡುಪಿ ಟೈಮ್ಸ್ ವರದಿ) ಕೊರೋನಾ ಸೋಂಕಿಗೆ ರವಿವಾರ ಇಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಕ್ಕಿಕಟ್ಟೆಯ 60 ವರ್ಷದ ಮತ್ತು ಬೈಂದೂರಿನ 63 ವರ್ಷದ ವೃದ್ದರಿಬ್ಬರು ಮೃತರಾಗಿದ್ದಾರೆ.
ಕುಕ್ಕಿಕಟ್ಟೆಯ ವ್ಯಕ್ತಿ ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆಗೆ ದಾಖಲಾಗಿದ್ದರೆ, ಬೈಂದೂರು ವ್ಯಕ್ತಿ ಶ್ವಾಸಕೋಶದ ಚಿಕಿತ್ಸೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಇವರಿಬ್ಬರ ಗಂಟಲ ದ್ರವದ ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಜಿಲ್ಲಾಡಳಿತದ ನಿರ್ದೇಶನದಂತೆ ಮೃತರ ಅಂತ್ಯ ಕ್ರಿಯೆ ನಡೆಯಲಿದೆ.