ಪರಿಷ್ಕೃತ ಮಾರ್ಗಸೂಚಿ- ವಿದೇಶಗಳಿಂದ ಬಂದು ಕೋವಿಡ್ ಪಾಸಿಟಿವ್ ಕಂಡುಬಂದರೆ ಐಸೊಲೋಶನ್ ಕಡ್ಡಾಯವಲ್ಲ
ನವದೆಹಲಿ: ಹೊರ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ನಾಳೆಯಿಂದ ಕಾರ್ಯರೂಪಕ್ಕೆ ಬರಲಿದೆ.ಉಳಿದಂತೆ ಪರಿಷ್ಕೃತ ಮಾರ್ಗಸೂಚಿ ಹಿಂದಿನ ಮಾರ್ಗಸೂಚಿಯಂತೆ ಮುಂದುವರಿಯಲಿದೆ.
ಈಗಿರುವ ಮಾರ್ಗಸೂಚಿ ಏನು: ಅತಿ ಹೆಚ್ಚು ಅಪಾಯಕಾರಿ ಕೋವಿಡ್ ಸೋಂಕಿನ ದೇಶಗಳು ಸೇರಿದಂತೆ ಯಾವುದೇ ದೇಶಗಳಿಂದ ಬರುವವರು ಪ್ರತ್ಯೇಕವಾಗಿ ಉಳಿದುಕೊಂಡು ಕೋವಿಡ್ ಶಿಷ್ಠಾಚಾರದಂತೆ ಕೆಲ ದಿನಗಳವರೆಗೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ನಿನ್ನೆ ಹೊರಡಿಸಲಾಗಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ಭಾರತಕ್ಕೆ ಬಂದಾಗ ಕಡ್ಡಾಯವಾಗಿ ಪ್ರತ್ಯೇಕವಾಗಿರಬೇಕು ಎಂಬ ನಿಯಮವನ್ನು ತೆಗೆದುಹಾಕಿದೆ.
ಹೊಸ ಮಾರ್ಗಸೂಚಿಯಲ್ಲಿ ಭಾರತಕ್ಕೆ ಹೊರದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಕೊರೋನಾ ಪಾಸಿಟಿವ್ ಬಂದರೆ ಅವರನ್ನು ಪ್ರತ್ಯೇಕಗೊಳಿಸಿ ಶಿಷ್ಠಾಚಾರದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಕಡ್ಡಾಯವಾಗಿ ಪ್ರತ್ಯೇಕ ವ್ಯವಸ್ಥೆಯಲ್ಲಿ ಇರಬೇಕಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಯಾಣಿಕರಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣವೇ ಪ್ರತ್ಯೇಕಗೊಳಿಸಿ ಪರೀಕ್ಷೆ ಮಾಡಲಾಗುತ್ತದೆ. ಆರೋಗ್ಯ ಶಿಷ್ಠಾಚಾರ ಪ್ರಕಾರ ವೈದ್ಯಕೀಯ ಸೌಲಭ್ಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಪಾಸಿಟಿವ್ ಬಂದರೆ ಅವರ ಸಂಪರ್ಕಿತರನ್ನು ಪತ್ತೆಹಚ್ಚಿ ಮುಂದಿನ ಕೊರೋನಾ ಶಿಷ್ಠಾಚಾರ ಪಾಲಿಸಲಾಗುತ್ತದೆ.