ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು, ನೈಟ್ ಕರ್ಫ್ಯೂ ಮುಂದುವರಿಕೆ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ರದ್ದುಪಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ತಾಂತ್ರಿಕ ಸಲಹಾ ಸಮಿತಿ ವಾರಾಂತ್ಯದ ಕರ್ಪ್ಯೂ ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬೆಂಗಳೂರಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಬಗ್ಗೆ ಪ್ರಸ್ತಾಪ ಮಾಡಿದೆ. ವೀಕೆಂಡ್ ಕರ್ಪ್ಯೂ ಹೊರತುಪಡಿಸಿ ಇತರ ಮಾರ್ಗಗಳ ಮೂಲಕ ನಿರ್ಬಂಧ ಕ್ರಮ ಜಾರಿಗೆ ಸಲಹೆ ನೀಡಿತ್ತು.

ಇಂದು ನಡೆದ ಈ ಮಹತ್ವದ ಸಭೆಯಲ್ಲಿ ಸಚಿವರಾದ ಡಾ.ಕೆ ಸುಧಾಕರ್, ಆರಗ ಜ್ಞಾನೇಂದ್ರ, ಆರ್. ಅಶೋಕ್, ಗೋವಿಂದ್ ಕಾರಜೋಳ, ಬಿ.ಸಿ ನಾಗೇಶ್ ಭಾಗಿಯಾಗಿದ್ದರು. ಅಂತೆಯೇ ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಪ್ರತಿನಿಧಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಒಟ್ಟು 2,93,241 ಸಕ್ರಿಯ ಪ್ರಕರಣಗಳಿದ್ದು, 2.86 ಲಕ್ಷ ಮಂದಿ ಮನೆಗಳಲ್ಲೇ ಪ್ರತ್ಯೇಕ ವಾಸವಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5343 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 340 ಜನ ಐಸಿಯುನಲ್ಲಿದ್ದು, 127 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿಯೇ ತಜ್ಞರು ವಾರಾಂತ್ಯ ಕರ್ಫ್ಯೂ ಕೈಬಿಡಲು ಸಲಹೆ ನೀಡಿದರು ಎಂದರು.

ಯಾವ ನಿರ್ಬಂಧ ಮುಂದುವರಿಕೆ

* ಮದುವೆ ಒಳಾಂಗಣ 100 ಜನ, ಹೊರಾಂಗಣ 200 ಜನಕ್ಕೆ ಅವಕಾಶ

* ಮೆರವಣಿಗೆ, ಜಾತ್ರೆ, ರ್‍ಯಾಲಿ, ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ

* ಹೊಟೇಲ್‌, ರೆಸ್ಟೋರೆಂಟ್‌, ಬಾರ್‌, ಕ್ಲಬ್‌ ಮತ್ತಿತರ ಕಡೆಗಳಲ್ಲಿ ಶೇ 50:50 ನಿಯಮ

* ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರಗಳಲ್ಲಿ ಈಗಿರುವ ನಿಯಮಗಳೇ ಮುಂದುವರಿಯಲಿದೆ

ರಾಜ್ಯ ಸರ್ಕಾರದ ವೀಕೆಂಡ್ ಕರ್ಪ್ಯೂಗೆ ಬಿಜೆಪಿ ನಾಯಕರು, ರಾಜ್ಯದ ವರ್ತಕರು ಕೂಡ ವಿರೋಧ ವ್ಯಕ್ತಪಡಿಸಿದ್ದರು.

3 thoughts on “ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು, ನೈಟ್ ಕರ್ಫ್ಯೂ ಮುಂದುವರಿಕೆ

  1. Respected sir/mam
    I am from Bangalore City for my higher education i am studying in manipal Diploma college and due to high rise of COVID case we students who stay in hostel are facing problems ,we are the college to take online classes but they said no. In this pandemic its really risky for students to attend college and the strength of my class is 50 itz fulll we have so many departments which makes it more easy for COVID to spread in whole college

Leave a Reply

Your email address will not be published. Required fields are marked *

error: Content is protected !!