ಉಡುಪಿ: 3000 ಗಡಿ ದಾಟಿದ ಕೋವಿಡ್‌ ಸೋಂಕಿತರು

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಸೋಕಿತರ ಸಂಖ್ಯೆ 3,000 ಗಡಿದಾಟಿದೆ. ಶುಕ್ರವಾರ 190 ಮಂದಿಗೆ ಸೋಂಕು ದೃಢಪಟ್ಟಿದೆ. 

ಉಡುಪಿಯಲ್ಲಿ 99, ಕುಂದಾಪುರ 50 ಹಾಗೂ ಕಾರ್ಕಳದ 41 ಜನರಿಗೆ ಸೋಂಕು ಪಾಸಿಟಿವ್ ದೃಢವಾಗಿದೆ. ಇವರಲ್ಲಿ 112 ಪುರುಷರು, 78 ಮಹಿಳೆಯರಿದ್ದು, ಶೀತಜ್ವರ ಲಕ್ಷಣಗಳಿರುವ 56 ಹಾಗೂ ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದಿದ್ದ ಒಬ್ಬರಲ್ಲಿ ಸೊಂಕು ಕಂಡುಬಂದಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳು ಇಲ್ಲದವರಿಗೆ ಆಸ್ಪತ್ರೆಯ ಬದಲು ಹೋಂ ಐಸೊಲೇಷನ್‌ ಮಾಡಲಾಗುತ್ತಿದ್ದು ಸದ್ಯ 499 ಸೋಂಕಿತರು ಮನೆಯಲ್ಲಿದ್ದಾರೆ. ಉಳಿದವರಿಗೆ ಆಯಾ ತಾಲ್ಲೂಕಿನ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 413 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 611 ವರದಿಗಳು ಬರುವುದು ಬಾಕಿ ಇದೆ. ಸೋಂಕಿನ ಲಕ್ಷಗಳು ಕಂಡುಬಂದ 38 ಜನರನ್ನು ಐಸೊಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.

ಮೂವರು ಸಾವು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಮೂವರು ಮೃತಪಟ್ಟಿದ್ದಾರೆ. ಶೀತಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ 65 ವರ್ಷದ ವ್ಯಕ್ತಿ ಬುಧವಾರ ಮೃತಪಟ್ಟರೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 63 ವರ್ಷ ಹಾಗೂ 59 ವರ್ಷದ ಸೋಂಕಿತರು ಗುರುವಾರ ಮೃತಪಟ್ಟಿದ್ದಾರೆ. ಇಬ್ಬರೂ ಜುಲೈ 16 ಹಾಗೂ 17ರಂದು ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದರು.


ಜಿಲ್ಲೆಯಲ್ಲಿ ಶುಕ್ರವಾರ 88 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 1929 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1096 ಸಕ್ರಿಯ ಪ್ರಕರಣಗಳು ಇವೆ. 

Leave a Reply

Your email address will not be published. Required fields are marked *

error: Content is protected !!