ಕಾಪು: ಹೊಸ ಕಾರು ಖರೀದಿಸಲು ನಕಲಿ ದಾಖಲೆ ನೀಡಲು ಯತ್ನಿಸಿದ ವೈದ್ಯೆ!
ಉಡುಪಿ: ಹೊಸ ಕಾರು ಖರೀದಿಸಲು ಬ್ಯಾಂಕ್‌ಗೆ ನಕಲಿ ವೇತನ ದಾಖಲೆ ನೀಡಲು ಯತ್ನಿಸಿ ಕಾಪುವಿನ ವೈದ್ಯೆಯೊಬ್ಬರ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ.ರಿನೆಟ್ ಸೊನಿಯ ಡಿಸೋಜಾ ಎಂಬುವರು ತಾನು ಮಣಿಪಾಲ ಮಾಹೆಯಲ್ಲಿ ವೈದ್ಯೆ ಮತ್ತು ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಮಾಸಿಕ ವೇತನ 2.66 ಲಕ್ಷ ರೂ. ಎಂದು ಹೇಳಿ, ತನಗೆ ಮತ್ತು ಸಹೋದರನಿಗೆ ಕಾರು ಪಡೆದುಕೊಳ್ಳಲು ಸಾಲ ಕೊಡುವ ಬಗ್ಗೆ ಕಾಪು, ಮೂಡಬೆಟ್ಟುವಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಅಲ್ವಿನಾ ಡಿಸೋಜಾ ಅವರಿಗೆ ಮನವಿ ಮಾಡಿದ್ದರು. ಸಾಲದ ಅರ್ಜಿಯೊಂದಿಗೆ ಸಲ್ಲಿಸಿದ ವಿವರಗಳು, ಮಣಿಪಾಲ ಅಕಾಡೆಮಿ ಹೈಯರ್ ಎಜುಕೇಶನ್ ಅವರ ವೇತನ ಸ್ಲಿಪ್‌ಗಳನ್ನು ಬ್ಯಾಂಕ್‌ನವರು ಪರಿಶೀಲಿಸಿದಾಗ ಡಾ.ರಿನೆಟ್ ಸೊನಿಯ ಡಿಸೋಜಾ ಮಾಹೆಯಲ್ಲಿ ಉದ್ಯೋಗದಲ್ಲಿ ಇಲ್ಲ ಎಂಬ ಮಾಹಿತಿಯನ್ನು ಸಂಸ್ಥೆ ತಿಳಿಸಿದೆ. ಆರೋಪಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ಮೋಸ ಮಾಡಿ, ಸಾಲ ಪಡೆಯುವ ಉದ್ದೇಶ ಹೊಂದಿದ್ದರು ಎಂದು ಕಾಪು ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರು ದೂರು ದಾಖಲಿಸಿದ್ದಾರೆ. |