ಕುಂದಾಪುರ: ವರದಕ್ಷಿಣೆ ಕಿರುಕುಳ ದೂರು ದಾಖಲು
ಕುಂದಾಪುರ ಜ.7(ಉಡುಪಿ ಟೈಮ್ಸ್ ವರದಿ): ವರದಕ್ಷಿಣೆ ಕಿರುಕುಳ ನೀಡಿ ಹೆಚ್ಚುವರಿ ವರದಕ್ಷಿಣೆ ಪಡೆದಿರುವುದಾಗಿ ಕುಂದಾಪುರ ಠಾಣೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.
ಈ ಬಗ್ಗೆ ಪ್ರೇಮಿ ಬರೆಟ್ಟೋ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪ್ರೇಮಿ ಬರೆಟ್ಟೋ ಅವರು ಸಲಾಂ ತೊಟ್ಟಿಲ್ ಎಂಬಾತನೊಂದಿಗೆ 2003 ರ ಅ. 25 ರಂದು ವಿವಾಹವಾಗಿದ್ದು, ವಿವಾಹ ಪೂರ್ವದಲ್ಲಿ ಸಲಾಂ ವರದಕ್ಷಿಣೆಗಾಗಿ ರ 6,00,000 ರೂ. ಬೇಡಿಕೆ ಇಟ್ಟಿದ್ದ. ಅದರಂತೆ 3,00,000 ರೂ. ಹಣವನ್ನು ದೂರುದಾರರ ಮನೆಯವರು ನೀಡಿದ್ದಾರೆ. ಈ ನಡುವೆ 2010 ರಲ್ಲಿ ದೂರುದಾರರು ಉದ್ಯೋಗದ ನಿಮಿತ್ತ ಇಸ್ರೇಲ್ ಗೆ ಹೋಗಿದ್ದು, ಊರಿಗೆ ವಾಪಾಸ್ಸು ಬಂದ ವೇಳೆ ಪತಿ ಸಲಾಂ ಹೆಚ್ಚಿನ ವರದಕ್ಷಿಣೆ ಗಾಗಿ ಮದ್ಯಪಾನ ಮಾಡಿಕೊಂಡು ಬಂದು ದೂರುದಾರರಿಗೆ ಹೊಡೆದು ಹಲ್ಲೆ ಮಾಡಿರುವುದು ಮಾತ್ರವಲ್ಲದೆ 5 ಲಕ್ಷ ರೂ ವನ್ನು ಹೆಚ್ಚಿನ ವರದಕ್ಷಿಣೆ ಪಡೆದಿರುತ್ತಾನೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.