ಉಡುಪಿ: ಜ.8 ರ ಅಭಯಹಸ್ತ ವರ್ಷದ ವ್ಯಕ್ತಿ ಕಾರ್ಯಕ್ರಮ ಮುಂದೂಡಿಕೆ
ಉಡುಪಿ ಜ.6(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಉಡುಪಿಯ ಪುರಭವನದಲ್ಲಿ ಜ.8 ರಂದು ನಡೆಯಬೇಕಿದ್ದ ಅಭಯಹಸ್ತ ವರ್ಷದ ವ್ಯಕ್ತಿ 2022 ಹಾಗೂ ಅಭಯಹಸ್ತ ಪ್ರತಿಷ್ಠಿತ ಸಂಘಟನೆ 2022 ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ಕಾರ್ಯಕ್ರಮ ಆಯೋಜಕರು ಮಾಹಿತಿ ನೀಡಿದ್ದು, ಕಾರ್ಯಕ್ರಮದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.