4ನೇ ಅಖಿಲ ಭಾರತ ಮುಕ್ತ ಫೆಡೆ ರೇಟೆಡ್ ರ್ಯಾಪಿಡ್ ಚದುರಂಗ ಸ್ಪರ್ಧೆ: ಚಿನ್ಮಯ್ ಪ್ರಥಮ
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್(ಕೆಐಒಸಿಎಲ್)ವತಿಯಿಂದ ಕಾವೂರಿನ ಕೆ ಐಒಸಿಎಲ್ ಟೌನ್ ಶಿಪ್‍ನಲ್ಲಿ ಎರಡು ದಿನಗಳ ಕಾಲ ನಡೆದ ನಾಲ್ಕನೇ ಅಖಿಲ ಭಾರತ ಮುಕ್ತ ಫೆಡೆ ರೇಟೆಡ್ ರ್ಯಾಪಿಡ್ ಚದುರಂಗ ಪಂದ್ಯಾವಳಿ 2022 ರಲ್ಲಿ ಉಡುಪಿ ನಿಟ್ಟೂರಿನಲ್ಲಿರುವ ಮಹೇಶ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿನ್ಮಯ್, 1,200 ಕ್ಕಿಂತ ಕೆಳಗಿನ ಫಿಡೆ ರೇಟಿಂಗ್ ವಿಭಾಗದ 9 ಸುತ್ತಿನಲ್ಲಿ ಆರೂವರೆ ಅಂಕಗಳೊಂದಿಗೆ ಮೊದಲ ಸ್ಥಾನ ಹಾಗೂ ಮುಕ್ತ ವಿಭಾಗದಲ್ಲಿ 19ನೇ ಸ್ಥಾನವನ್ನು ಗಳಿಸಿದ್ದಾರೆ.