ಕುಂದಾಪುರ: ಚಿನ್ನಾಭರಣ ಕಳವು ಮಾಡಿ ನಕಲಿ ಚಿನ್ನ ಇಟ್ಟ ಮನೆ ಕೆಲಸದಾಕೆ
ಕುಂದಾಪುರ ಜ.5(ಉಡುಪಿ ಟೈಮ್ಸ್ ವರದಿ): ಚಿನ್ನಾಭರಣ ಕಳವು ಮಾಡಿ ನಕಲಿ ಚಿನ್ನ ಇಟ್ಟು ಮನೆ ಕೆಲಸದಾಕೆ ಮಾಲೀಕರಿಗೆ ವಂಚಿಸಿರುವ ಘಟನೆ ಕೊರ್ಗಿಯ ಕೊರವಡಿಮನೆ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಮನೆ ಮಾಲಕಿ ಭವಾನಿ ಶೆಡ್ತಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಭವಾನಿ ಶೆಡ್ತಿ ಅವರ ಮನೆಯಲ್ಲಿ ಸುಮಾರು 2ತಿಂಗಳಿನಿಂದ ಮನೆಕೆಲಸ ಮಾಡಿಕೊಂಡಿದ್ದ ಶಾಂತಕುಮಾರಿ ಯಾನೆ ಶಾಂತಮ್ಮ ಎಂಬಾಕೆಯು ಭವಾನಿ ಶೆಡ್ತಿ ಅವರು ಮನೆಯಲ್ಲಿ ಇಟ್ಟಿದ್ದ ಕಪಾಟಿನ ಕೀ ಬಳಸಿ ಗೋದ್ರೆಜ್ ಕಪಾಟಿನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಸರವನ್ನು ಕಳವು ಮಾಡಿದ್ದಾಳೆ. ಮಾತ್ರವಲ್ಲದೆ ಕಳವು ಮಾಡಿದ ಚಿನ್ನಾಭರಣವನ್ನು ಹೋಲುವ ನಕಲಿ ಆಭರಣಗಳನ್ನು ಅದೇ ಸ್ಥಳದಲ್ಲಿ ಇಟ್ಟು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.