ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ‌ ಗುತ್ತಿಗೆದಾರನಿಗೆ ರೂ. 28 ಲಕ್ಷ ವಂಚನೆ

ಶಂಕರನಾರಾಯಣ ಜ.4: ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ‌ ಹೇಳಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಕುಂದಾಪುರದ ಶಂಕರನಾರಾಯಣದಲ್ಲಿ ನಡೆದಿದೆ.

ಈ ಬಗ್ಗೆ ಶಂಕರನಾರಾಯಣದ ಸಂತೋಷ ಕುಮಾರ್ ಶೆಟ್ಟಿ ಎಂಬರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಇವರು,ಪಿಡ್ಲ್ಯೂ  ಗುತ್ತಿಗೆದಾರರಾಗಿದ್ದು, ಕುಂದಾಪುರದ ಶಂಕರನಾರಾಯಣದಲ್ಲಿ ಶ್ರೀಬ್ರಹ್ಮಲಿಂಗೇಶ್ವರ ಎಂಬ ಹೆಸರಿನ ಹಾರ್ಡವೇರ್ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದರು. 2021 ರ ಜ.10 ರಂದು ಇವರ ಅಂಗಡಿಗೆ ಬಂದ ಆರೋಪಿಗಳಾದ ಮಣಿಪಾಲದ ಲ್ಯಾನ್ಸಿರಾಜ್ ಮತ್ತು ಉಜಿಯ ಧರ್ಮಸ್ಥಳದ ಗಂಗಾಧರ ರಾವ್ ಎಂಬ ಇಬ್ಬರು ದೂರುದಾರರ ಬಳಿ 1,00,00,000 ರೂ. ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ತೆಗೆಯಿಸಿಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದರು. ಮಾತ್ರವಲ್ಲದೆ ದೂರುದಾರರಿಂದ ಸಾಲದ ಕಾಗದ ಪತ್ರ ಮಾಡಲು ಎಂದು ಹೇಳಿ 28,00,000 ರೂಪಾಯಿ ಹಣವನ್ನು ಪಡೆದುಕೊಂಡು ಹೋಗಿದ್ದರು. ಆದರೆ ಆ ಬಳಿಕ ಆರೋಪಿಗಳು ಸಾಲವನ್ನು ತೆಗೆಯಿಸಿ ಕೊಡದೇ, ಪಡೆದುಕೊಂಡ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!