| ಉಡುಪಿ ಜ.4(ಉಡುಪಿ ಟೈಮ್ಸ್ ವರದಿ): ಲವ್ ಜಿಹಾದ್ ತಡೆಗೆ ತಕ್ಷಣ ಕಾನೂನು ತರಬೇಕು ಎಂದು ಬಜರಂಗ ದಳ ಆಗ್ರಹಿಸಿದೆ.
ಈ ಬಗ್ಗೆಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಬಜರಂಗದಳದ ಕರ್ನಾಟಕ ದಕ್ಷಿಣಪ್ರಾಂತ ಸಂಯೋಜಕ ಸುನಿಲ್ ಕೆ.ಆರ್ ಅವರು, ಬಜರಂಗ ದಳ ನಿರಂತರವಾಗಿ 20 ವರ್ಷಗಳಿಂದ ಲವ್ ಜಿಹಾದ್ ನಡೆಯುತ್ತಿದೆ ಎಂಬ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಇದು ಲವ್ ಜಿಹಾದ್ ಮೋಸದ ನಾಟಕ ಇದಕ್ಕೆ ಹಿಂದು ಯುವತಿಯರು ಬಲಿಯಾಗಬಾರದು ಎಂಬ ಉದ್ದೇಶದಿಂದ ಜಾಗೃತಿ ಮೂಡಿಸುತ್ತಾ ಬಂದಿದೆ. ಹಿಂದೂ ಯುವತಿಯೊಂದಿಗೆ ಮೋಸದ ಪ್ರೀತಿಯ ನಾಟಕವಾಡಿ, ಆಸೆ ಆಮೀಷ ಒಡ್ಡಿ, ಮತಾಂತರ ಮಾಡಿ ದೇಶ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ, ಹಿಂದೂ ಧರ್ಮದ ವಿರುದ್ಧ ಕೆಲಸ ಮಾಡುವಂತೆ ಮಾಡುವ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಮಂಗಳೂರಿನ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬ ಅವರ ಮೊಮ್ಮಗನ ಪತ್ನಿಯನ್ನು ಬಂಧಿಸಿದ್ದಾರೆ. ಇದಿನಬ್ಬ ಅವರ ಅವರ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ನನ್ನು ಮದುವೆಯಾದ ದೀಪ್ತಿ ಎಂಬ ಹಿಂದು ಮಹಿಳೆ ಮರಿಯಮ್ಮಳಾಗಿ ಈ ದೇಶಕ್ಕೆ ಮಾರಕವಾಗಿರುವ ಸಿರಿಯ ದೇಶದ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಯೊಂದಿಗೆ ಕೈ ಜೋಡಿಸಿಕೊಂಡು ಬಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿಯಂತೆ ಬಂಧಿಸಿದ್ದಾರೆ.
ಹಾಗಾಗಿ ಇದೊಂದು ವ್ಯವಸ್ಥಿತವಾದ ಜಾಲವಾಗಿದ್ದು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಇಸ್ಲಾಮಿಗೆ ಮತಾಂತರಿಸಿ ಮದುವೆಯಾಗಿ ದೇಶ ವಿರೋಧಿ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದು ಹೆಣ್ಣುಮಕ್ಕಳನ್ನು ಇಸ್ಲಾಂ ಮತಾಂತರ ಮಾಡುವಂತಹ ವ್ಯವಸ್ಥಿತ ತಂಡ ಕಾರ್ಯಾಚರಿಸುತ್ತಿದ್ದು, ಇದೊಂದು ಯೋಜಿತ ಸಂಚು ಆಗಿದ್ದು ಇವರಿಗೆ ದೇಶ ವಿದೇಶಗಳಿಂದ ಹಣಕಾಸಿನ ನೆರವು ಬರುತ್ತಿದ್ದು ಮೂಲಭೂತವಾದಿ – ಇಸ್ಲಾಮಿಕ್ ಸಂಘಟನೆಯ ಕೈವಾಡವಿದ್ದು, ಈ ಹಿನ್ನೆಲೆಯಲ್ಲಿ ಇನ್ನಷ್ಟು ಉಗ್ರರು ಈ ಭಾಗದಲ್ಲಿ ನೆಲೆಸಿರುವ ಶಂಕೆ ಇದ್ದು ಇನ್ನಷ್ಟು ತನಿಖೆ ನಡೆಸಿ ಈ ಉಗ್ರರ ಜಾಲವನ್ನುಬಂಧಿಸಬೇಕು ಹಾಗೂ ತಕ್ಷಣ ಕರ್ನಾಟಕದಲ್ಲಿ ಆಧ್ಯಾದೇಶ ಹೊರಡಿಸಿ ಲವ್ ಜಿಹಾದ್ ತಡೆ ಕಾನೂನು ಶೀಘ್ರವಾಗಿ ತರಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಜರಂಗದಳ ಉಡುಪಿ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ, ಮಂಗಳೂರು ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ, ಭರತ್ ಕುಂಡೇಲ್ ಉಪಸ್ಥಿತರಿದ್ದರು. | |