ಮಹಾರಾಷ್ಟ್ರ: ಕೊರೊನಾ 3ನೇ ಅಲೆ ಸೃಷ್ಟಿ, ಜ.31 ರವರೆಗೆ ಶಾಲೆಗಳು ಬಂದ್!
ಮುಂಬೈ, ಜ 03: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಮುಂಬೈನಲ್ಲಿರುವ ಶಾಲೆಗಳು ತಕ್ಷಣದಿಂದ ಜಾರಿಗೆ ಬರುವಂತೆ ಮುಚ್ಚಲ್ಪಟ್ಟಿವೆ ಎಂದು ಮುಂಬೈ ಬಿಎಂಸಿ ಮುಖ್ಯಸ್ಥ ಇಕ್ಬಾಲ್ ಚಹಲ್ ಘೋಷಣೆ ಮಾಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಎಂಸಿ ಕಚೇರಿ, ಮಹಾರಾಷ್ಟ್ರ ಕೊರೊನಾ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಜನವರಿ 31ರವರೆಗೆ ಶಾಲೆಗಳು ಮುಚ್ಚಲ್ಪಡುತ್ತವೆ. 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ತರಗತಿಗಳು ಮುಂದುವರಿಯುತ್ತವೆ ಎಂದಿದೆ.
ಒಂದು ತಿಂಗಳ ನಂತರ ನಡೆಯಲಿರುವ ನಿರ್ಣಾಯಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು 10ನೇ ತರಗತಿ (ಎಸ್ಎಸ್‌ಸಿ) ಮತ್ತು 12ನೇ ತಗರತಿ (ಎಚ್ಎಸ್‌ಸಿ) ಯನ್ನು ನಡೆಸಲು ತೀರ್ಮಾನಿಸಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಮುಂದುವರಿಯಲಿವೆ.
ಬಿಎಂಸಿ ಆಯುಕ್ತರಾದ ಐ.ಎಸ್. ಚಾಹಲ್ ಮಾತನಾಡಿ, ‘ಶಾಲೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲ ತರಗತಿಗಳು ನಡೆಯಲಿವೆ. ಈ ಹಿಂದೆ ನಡೆಯುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳಿಗೂ ಆನ್‌ಲೈನ್ ತರಗತಿಗಳು ನಡೆಯುತ್ತವೆ’ ಎಂದು ತಿಳಿಸಿದ್ದಾರೆ.
ಆನ್‌ಲೈನ್ ತರಗತಿಗಳನ್ನು ನಡೆಸಲು ಅನುಮತಿ ನೀಡಿ 2020ರ ಮಾರ್ಚ್‌ನಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನು ಕೆಲವು ವಾರಗಳ ಹಿಂದಷ್ಟೇ ತೆರೆಯಲು ಬಿಎಂಸಿ ಮತ್ತು ರಾಜ್ಯ ಸರ್ಕಾರ ನಿರ್ಧರಿಸಿದ್ದವು.
ಮೂರನೇ ಅಲೆಯ ಭೀತಿ ಎದುರಾಗಿರುವುದರಿಂದಾಗಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದಾಗಿ ಜ. 31ರವರೆಗೆ 1 ರಿಂದ 9 ಮತ್ತು 11ನೇ ತರಗತಿವರೆಗೆ ಭೌತಿಕ ತರಗತಿಗಳನ್ನು ಮುಚ್ಚಲು ನಿರ್ಧರಿಸಿದೆ.
ಕಳೆದ ಕೆಲವು ವಾರಗಳಿಂದೀಚೆಗೆ ಕೋವಿಡ್-19 ಮತ್ತು ಓಮೈಕ್ರಾನ್ ಪ್ರಕರಣಗಳು ಮುಂಬೈನಲ್ಲಿ ಹೆಚ್ಚಾಗುತ್ತಿದ್ದು, 328 ಓಮೈಕ್ರಾನ್ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ.
Very Good
Coverage of all related news Which updates Karavali people living all over India & the world