ಮಲ್ಪೆ: ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ಬೋಟ್ ಹಾಗೂ ಮೀನುಗಾರರ ರಕ್ಷಣೆ
ಮಲ್ಪೆ ಜ.2: ತಾಂತ್ರಿಕ ದೋಷದಿಂದ ಸಮುದ್ರ ಮಧ್ಯೆ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕಾ ಬೋಟ್ ಹಾಗೂ ಮೀನುಗಾರರನ್ನು ಮಲ್ಪೆ ಸಿಎಸ್ ಪಿ ಠಾಣೆಯ ಪೊಲೀಸರು ರಕ್ಷಿಸಿದ್ದಾರೆ.
ಇದೀಗ ರಕ್ಷಿಸಲ್ಪಟ್ಟ ಬೋಟ್ ನ್ನು ಮಲ್ಪೆ ಬಂದರಿಗೆ ಕರೆತರಲಾಗಿದ್ದು, ಮೀನುಗಾರರು ಸುರಕ್ಷಿತರಾಗಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆಗೆ ಸುಮಾರಿಗೆ ಮಲ್ಪೆಯ ಶ್ರೀರಾಮ ಎಂಬ ಹೆಸರಿನ ಮೀನುಗಾರಿಕಾ ಬೋಟ್ ತಾಂತ್ರಿಕ ತೊಂದರೆಯಿಂದ ಅಳಿವೆ ಭಾಗದಲ್ಲಿ ಕಲ್ಲಿನ ಸಮೀಪಕ್ಕೆ ಬಂದು ಅಪಾಯದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಮಲ್ಪೆ ಸಿಎಸ್ ಪಿ ಠಾಣೆಯ ಸಮುದ್ರ ಗಸ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕೆಟ್ಟುನಿಂತಿದ್ದ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿ ಮಲ್ಪೆ ಬಂದರಿಗೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಮಲ್ಪೆ ಸಿಎಸ್ಪಿ ಠಾಣೆಯ ಸಿಬ್ಬಂದಿ ತನಿಯ ಹೆಚ್. ಸಿ., ತಾಂತ್ರಿಕ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಬೋಟ್ ಕ್ಯಾಪ್ಟನ್, ದೀಪಕ್ ಬೋಟ್ ಕ್ಯಾಪ್ಟನ್ ಹಾಗೂ ಸಹಾಯಕ ಸಿಬ್ಬಂದಿ ಕೃಷ್ಣಾನಂದ ರವರುಗಳು ಭಾಗಿಯಾಗಿದ್ದರು.