ರಾತ್ರಿ ಕರ್ಫ್ಯೂ ಆದೇಶ ಉಲ್ಲಂಘನೆ- ಡಿಜೆ ಸೌಂಡ್‌ ಬಾಕ್ಸ್‌ ವಶಕ್ಕೆ ಪಡೆದ ಉಡುಪಿ ಪೊಲೀಸರು

 ಉಡುಪಿ:ಜ.2 (ಉಡುಪಿ ಟೈಮ್ಸ್ ವರದಿ): ಬಡಗುಬೆಟ್ಟು ಗ್ರಾಮದ ಪಣಿಯಾಡಿಯಲ್ಲಿ ಮದುವೆ ರಿಶಪ್ಶನ್ ನಿಮಿತ್ತ ಕೋವಿಡ್ ನಿಯಮ ಮೀರಿ ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀಕರ್ಕಶವಾಗಿ ಡಿಜೆಸೌಂಡ್‌ ಹಾಕಿಕೊಂಡು ನೃತ್ಯ ಮಾಡುತ್ತಿದ್ದ ಮನೆಗೆ ಪೊಲೀಸರು ದಾಳಿಮಾಡಿ ಡಿಜೆ ಸೌಂಡ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆದ ಇಂದು ಘಟನೆ ನಡೆದಿದೆ.

ಉಡುಪಿ ನಗರ ಪೊಲೀಸ್‌ ಠಾಣೆಯ ಪಿಎಸ್ಐ ವಾಸಪ್ಪನಾಯ್ಕ್‌ ಅವರು, ಜ.2  ರಂದು ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅವರ ಸೂಚನೆಯಂತೆ ರಾತ್ರಿ ರೌಂಡ್ಸ್ ಅಧಿಕಾರಿಯಾದ ಠಾಣಾ ಪ್ರೊಬೇಷನರಿ ಪಿಎಸ್ ಐ ಹಾಗೂ ಗಸ್ತು  ಸಿಬ್ಬಂದಿಯವರೊಂದಿಗೆ ಉಡುಪಿಯ ಬಡಗುಬೆಟ್ಟುವಿನ  ಪಣಿಯಾಡಿ ಎಂಬಲ್ಲಿಗೆ ಹೋಗಿ ಪರಿಶೀಲಿಸಿದಾಗ ಶಿವರಾಮ್‌ ಶೆಟ್ಟಿಗಾರ್‌ ಎಂಬವರ ಮನೆಯಲ್ಲಿ ಅವರ ಮಗ ಧೀರಜ್‌ ರವರ ಮದುವೆ ರಿಸೆಪ್ಷನ್‌ ಕಾರ್ಯಕ್ರಮದ ಅಂಗವಾಗಿ ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ, ಕೋವಿಡ್ ನೈಟ್ ಕರ್ಫ್ಯೂ ನಿಯಮಗಳನ್ನು ಹಾಗೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ, ಅತೀಕರ್ಕಶವಾಗಿ ಡಿಜೆಸೌಂಡ್‌ ಹಾಕಿಕೊಂಡು ಅವಧಿ ಮೀರಿ ನೃತ್ಯ ಮಾಡಿಕೊಂಡಿದ್ದೂದು ಕಂಡು ಬಂದಿದೆ. ಸ್ಥಳಕ್ಕೆ ದಾಳಿ ನಡೆದ ಪೊಲೀಸರು ಎರಡು ಡಿಜೆ ಸೌಂಡ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!