ಶಾಲಾ ಕಾಲೇಜುಗಳಲ್ಲಿ ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸಿ- ಉಡುಪಿ ಜಿಲ್ಲಾ ರಾಮ್ ಸೇನಾ

ಉಡುಪಿ: ಇತ್ತೀಚೆಗೆ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಜಾಬ್ ಧರಿಸುವ ವಿಷಯದಲ್ಲಿ ಗೊಂದಲ ಸೃಷ್ಟಿಸಿರುವುದು ದುರದೃಷ್ಟಕರ. ಕಳೆದ 36 ವರ್ಷಗಳಿಂದ ಧಾರ್ಮಿಕ ಸಂಹಿತೆಯನ್ನು ಕಾಪಾಡಿಕೊಂಡು ಬಂದ ಕಾಲೇಜಿಗೆ ಏಕಾಏಕಿ ಹಿಜಾಬ್ ಧರಿಸಿ ಬಂದ ವಿಧ್ಯಾರ್ಥಿನಿಯರ ಹಿಂದಿರುವ ಹಾಗೂ ಶಾಲಾ ಕಾಲೇಜುಗಳಲ್ಲಿ ಮತೀಯ ವಿಷ ಬೀಜವನ್ನು ಬಿಚ್ಚುತ್ತಿರುವ ಮತೀಯ ಸಂಘಟನೆಯನ್ನು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

ವಸ್ತ್ರಸಂಹಿತೆ ವಿಚಾರದಲ್ಲಿ ಆಯಾಯ ಶಾಲಾ-ಕಾಲೇಜಿನ ನಿಯಮಗಳನ್ನು ಪಾಲಿಸುವುದು ಪೋಷಕರ ಹಾಗೂ ವಿದ್ಯಾರ್ಥಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಾಲಾಭಿವೃದ್ಧಿ ಸಮಿತಿಯ ನಿಲುವನ್ನು ಉಡುಪಿ ಜಿಲ್ಲಾ ರಾಮ್ ಸೇನೆಯು ಗೌರವಿಸುತ್ತದೆ. ಮತೀಯ ಸಂಘಟನೆಗಳಿಂದ ಮುಗ್ಧ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ರಕ್ಷಿಸಲು ಸರಕಾರವು ಏಕರೂಪ ವಸ್ತ್ರಸಂಹಿತೆಯನ್ನು ಮುಂದಿನ ಶೈಕ್ಷಣಿಕ ವರ್ಷದ ಒಳಗೆ ಸರ್ಕಾರವು ಜಾರಿಗೊಳಿಸಬೇಕೆಂದು ಉಡುಪಿ ಜಿಲ್ಲಾ ರಾಮ್ ಸೇನಾ ಅಧ್ಯಕ್ಷ ಜಯರಾಂ ಅಂಬೆಕಲ್ಲು ಸರಕಾರಕ್ಕೆ ತಾಕೀತು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!