ಧರ್ಮ ಫೌಂಡೇಶನ್: ಜ.2 ಉಚಿತ ನೇತ್ರ ತಪಾಸಣಾ ಶಿಬಿರ 

ಉಡುಪಿ: ಉಚಿತ ನೇತ್ರ ತಪಾಸಣಾ ಶಿಬಿರ: ಧರ್ಮ ಫೌಂಡೇಶನ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ಸಹಭಾಗಿತ್ವದಲ್ಲಿ ಧರ್ಮ ಫೌಂಡೇಶನ್ 2004 ರಿಂದ ದೇಶೀಯ ಸ್ಥಳೀಯ ಗೋ ತಳಿಗಳನ್ನು ವೃದ್ದಿಪಡಿಸುವ ಕಾರ್ಯದಲ್ಲಿ, ಇತರ ಸಾಮಾಜಿಕ ಕಾರ್ಯದಲ್ಲಿ ಕೃತಿಶೀಲವಾಗಿದೆ.

ಇದರೆ ಫಲವಾಗಿ ಇಂದು ಉತ್ತರಕನ್ನಡದಿಂದ ಕಾಸರಗೋಡ್ ತನಕದ ಕರಾವಳಿ ಪ್ರದೇಶದಲ್ಲಿರುವ ಸ್ಥಳೀಯ ಗೋತಳಿಯ 50 ಕ್ಕೂ ಹೆಚ್ಚು ದನಗಳು ಧರ್ಮ ಫೌಂಡೇಶನ್ ಇದರ ಶಿರ್ವ-ಮಟ್ಟಾರಿನ ಬಳಿಯ ಪಾಂಜಗುಡ್ಡೆ ಕೇಂದ್ರದಲ್ಲಿವೆ. ಈ ದನಗಳು ಕನಿಷ್ಠ 12 ವರ್ಷಕ್ಕೂ ಮಿಕ್ಕ ವಂಶಾವಳಿಯನ್ನು ಹೊಂದಿವೆ. ಈ ತಳಿಯು ಸ್ಥಳೀಯವಾಗಿ  ಕಾಟು ಪೆತ್ತ/ಕರಾವಳಿ ದ್ವಾರ್ಫ್/ಮಲೆನಾಡು ಗಿಡ್ಡ ಮುಂತಾದ ಹೆಸರಿನಿಂದ ಪರಿಚಿತವಾಗಿದೆ. ಕರಾವಳಿ ಪ್ರದೇಶದ ಉರಿ ಸೆಕೆ, ಜಡಿಮಳೆ ಮುಂತಾದ ತೀವ್ರವಾದ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಈ ತಳಿಯ ವಿಶೇಷವಾಗಿದೆ. ಭರತ ಭೂಮಿಯ ಸಂಸ್ಕೃತಿ ಆಕಳ ಮಧ್ಯದಲ್ಲಿ ಬೆಳೆದದ್ದು. ಈ ನಿಟ್ಟಿನಲ್ಲಿ ಹಲವು ವೈಶಿಷ್ಟ್ಯಗಳನ್ನೂ ಹೊಂದಿದ ಕರಾವಳಿ ಪ್ರದೇಶದ ತಳಿಗಳನ್ನು ರಕ್ಷಿಸಿ ಬೆಳೆಸುವುದು ಕೂಡ ನಮ್ಮ ಸಂಸ್ಕೃತಿ ರಕ್ಷಣೆಯಕಾರ್ಯವೇ ಆಗಿದೆ.

ನಾಳೆ ಧರ್ಮ ಫೌಂಡೇಶನ್ ಮುಂದಾಳುತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಸಂಪರ್ಕ-ಧರ್ಮ ಫೌಂಡೇಶನ್ ಅಧ್ಯಕ್ಷ ಗಿರೀಶ – 9946815444

Leave a Reply

Your email address will not be published. Required fields are marked *

error: Content is protected !!