ಕೊರಗರ ಮೇಲೆ ದೌರ್ಜನ್ಯ: ಶೋಭಾ ಕರಂದ್ಲಾಜೆಯವರ ಮೌನ ಏಕೆ?-ಸಿಪಿಐ
ಉಡುಪಿ: ಎಲ್ಲಿ ಗಲಭೆ, ಕೊಲೆಗಳು ನಡೆದರೂ ‘ಹಿಂದೂ ನಾವೆಲ್ಲ ಒಂದು ಎಂದು ಪ್ರಚೋದಕ ಹೇಳಿಕೆ ನೀಡುತ್ತಿದ್ದ ಶೋಭಾ ಕರಂದ್ಲಾಜೆಯವರು, ಕೊರಗರ ಮೇಲೆ ದೌರ್ಜನ್ಯ ನಡೆದು, ದೌರ್ಜನ್ಯ ಎಸಗಿದ ಪೋಲೀಸರೇ ಪ್ರತಿದೂರು ನೀಡಿದರೂ ಮೌನ ವಹಿಸಿರುವುದು ಏಕೆ ಎಂದು ಸಿಪಿಐ(ಎಂ) ಪ್ರಶ್ನಿಸುತ್ತದೆ.
ದಿನ ಕಳೆದಂತೆ ಇದೊಂದು ಯೋಜಿತ ಕ್ರತ್ಯ ಎಂಬಂತೆ ಕಂಡುಬರುತ್ತದೆ. ದೂರು ನೀಡಿದ ಉರಾಳರಿಗೂ ಕೊರಗ ಕುಟುಂಬಕ್ಕೂ ಜಮೀನಿನ ತಕರಾರು ಇದೆ ಎಂಬ ಮಾಹಿತಿ ಬರುತ್ತಿದೆ. ಸಮಾಜ ಕಲ್ಯಾಣ ಸಚಿವರು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಮದುವೆ ಕಾರ್ಯಕ್ರಮ ದಲ್ಲಿ ‘ಸರಕಾರ ನಿಮ್ಮೊಂದಿಗಿದೆ’ ಎಂದು ಹೇಳಿದ ತಕ್ಷಣವೇ ಪೋಲೀಸರು ಪ್ರತಿದೂರು ಸಲ್ಲಿಸುತ್ತಾರೆ ಎಂದಾದರೆ ಬಿಜೆಪಿ ಸರಕಾರಕ್ಕೆ ಪೋಲೀಸ್ ಇಲಾಖೆಯ ಮೇಲೆ ಹಿಡಿತ ಇಲ್ಲವೇ?. ಉಡುಪಿ ಕ್ಷೇತ್ರದ ಸಂಸತ್ ಸದಸ್ಯರಾಗಿರುವ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆಯವರು ರಾಜ್ಯ ಬಿಜೆಪಿ ಸರಕಾರದ ಮೇಲೆ ಒತ್ತಡ ಬೀರಿ, ಸುಳ್ಳು ದೂರನ್ನು ಸ್ವೀಕರಿಸದೆ ದೌರ್ಜನ್ಯ ಎಸಗಿದ ಪೋಲೀಸರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನೊಂದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.