ಜ.8 -“ಅಭಯಹಸ್ತ ವರ್ಷದ ವ್ಯಕ್ತಿ-2022” ಹಾಗೂ “ಅಭಯ ಹಸ್ತ ಪ್ರತಿಷ್ಠಿತ ಸಂಘಟನೆ – 2022” ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಉಡುಪಿ ಜ.1(ಉಡುಪಿ ಟೈಮ್ಸ್ ವರದಿ): ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಅಭಯಹಸ್ತ ವರ್ಷದ ವ್ಯಕ್ತಿ- 2022” ಹಾಗೂ “ಅಭಯ ಹಸ್ತ ಪ್ರತಿಷ್ಠಿತ ಸಂಘಟನೆ – 2022” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ.8 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಪುರಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಎಸ್.ಜಯಕರ ಶೆಟ್ಟಿ ಅವರಿಗೆ ಅಭಯ ಹಸ್ತ ವರ್ಷದ ವ್ಯಕ್ತಿ 2022 ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಕರಾವಳಿ ಯೂತ್ ಕ್ಲಬ್, ಮಣಿಪಾಲದ ಮಾತೃಶ್ರೀ ಸೇವಾ ಸಂಘ ಹಾಗೂ ಕುಂದಾಪುರದ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಗೆ ಅಭಯ ಹಸ್ತ ಪ್ರತಿಷ್ಠಿತ ಸಂಘಟನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಭಾಕಾರ್ಯಕ್ರಮವು ಸಂಜೆ 3.30 ರಿಂದ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸಂಜೆ 4.30 ರಿಂದ ಪೆರ್ಡೂರಿನ ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯ ವೀರ ಬರ್ಭರೀಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 2.30 ರಿಂದ 3.30 ರ ವರೆಗೆ ಮೂರು ಮುತ್ತು ಕಲಾವಿದರಿಂದ ಹಾಸ್ಯ ಸಂಜೆ ನಡೆಯಲಿದೆ ಈ ಕಾರ್ಯಕ್ರಮದ ನೇರ ಪ್ರಸಾರವನ್ನು “ಉಡುಪಿ ಟೈಮ್ಸ್ ಯೂಟ್ಯೂಬ್ ಚಾನೆಲ್“ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ನಾಡೋಜ ಜಿ. ಶಂಕರ್ ಅವರ ಪ್ರೇರಣೆಯಿಂದ ಸ್ಥಾಪನೆಗೊಂಡ ಅಭಯಹಸ್ತ ಹೆಲ್ಪ್ ಲೈನ್ ಉಡುಪಿ.
ಇದು 2020 ರ ಮಾರ್ಚ್ ನಲ್ಲಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾಗ ನಿತ್ಯ ತುರ್ತು ರಕ್ತದಾನಿಗಳ ಅನಿವಾರ್ಯತೆಯನ್ನು ಮನಗಂಡು ಸತೀಶ್ ಸಾಲ್ಯಾನ್ ಮಣಿಪಾಲ್ ಹಾಗೂ ರಾಜೇಶ್ ಮೆಂಡನ್ ಬೈಪಾಸ್ ಸಾರಥ್ಯದಲ್ಲಿ ಹುಟ್ಟಿಕೊಂಡ ಸಂಸ್ಥೆಯಾಗಿದೆ.
ರಕ್ತದ ಅಗತ್ಯತೆಯನ್ನು ಮನಗಂಡು ವಾಟ್ಸ್ ಅ್ಯಪ್ ಗ್ರೂಪ್ ಮೂಲಕ ಆರಂಭವಾದ ಕಾರ್ಯ ಇಂದು ರಕ್ತದಾನ ಕ್ಷೇತ್ರದಲ್ಲಿ ತನ್ನದೇ ಆದ ದಾಖಲೆ ಬರೆದಿದೆ. ಈ ಸಂಸ್ಥೆ ಇದೀಗ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂಸ್ಥೆ ವತಿಯಿಂದ ಇದುವರೆಗೆ ಉಡುಪಿ, ದ.ಕ ಜಿಲ್ಲೆಯಾದ್ಯಂತಹ 72 ಕ್ಕೂ ಅಧಿಕ ಸ್ವಯಂಪ್ರೇರಿತ ರಕ್ತದಾನ ಶಿಜರದ ಆಯೋಜನೆ ಹಾಗೂ 1500ಕ್ಕೂ ಅಧಿಕ ನಿತ್ಯ ತುರ್ತು ರಕ್ತದಾನಿಗಳನ್ನು ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ. ಹಾಗೂ ಈ ವರೆಗೆ 7000 ಕ್ಕೂ ಅಧಿ ಯುನಿಟ್ ರಕ್ತ ಸಂಗ್ರಹವಾಗಿದೆ. ಸಂಸ್ಥೆಯ ಸೇವೆಯನ್ನು ಮೆಚ್ಚಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಪುರಸ್ಕಾರ ಈಗಾಗಲೇ ಲಭಿಸಿರುತ್ತದೆ. ಉಡುಪಿ ಕುಂದಾಪುರ ವಿಭಾಗದಲ್ಲಿ ಕೊರೋನ ವಾರಿಯರ್ ಪ್ರಶಸ್ತಿ ಹಾಗೂ ಮಣಿಪಾಲ ಆಸ್ಪತ್ರೆ ಕೊಡಮಾಡುವ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗಳೂಲಭಿಸಿದೆ.
ಸುಮಾರು ಒಂದು ವರ್ಷಗಳ ಕಾಲ ಯಾವುದೇ ಸಂಘ ಸಂಸ್ಥೆಗಳಿಂದ ದೇಣಿಗೆಯನ್ನು ಪಡೆಯದೆ ಸ್ವಂತ ಖರ್ಚಿನಲ್ಲಿ ರಕ್ತದಾನ ಶಿಜರಗಳನ್ನು ಆಯೋಜನೆ ಮಾಡಿದ್ದ ಅಭಯಹಸ್ತ ಸಂಸ್ಥೆ ಆಗಸ್ಟ್ 2021 ರಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಾನಿಗಳ ಸಹಕಾರದೊಂದಿಗೆ ಇನ್ನಷ್ಟು ನಿರಂತರ ಸೇವೆಯನ್ನು ಮಾಡಲು ಮುಂದಾಗಿದೆ. ಇದರ ಗೌರವ ಅಧ್ಯಕ್ಷರಾಗಿ ಯಶ್ಪಾಲ್ ಸುವರ್ಣ ಹಾಗೂ ಅಧ್ಯಕ್ಷರಾಗಿ ರಾಜೇಶ್ ಶೆಟ್ಟ ಮುನಿಯಾಲು ಅವಿರೋಧ ಆಯ್ಕೆಯಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ಕ್ಯಾಂಪ್ ಮೂಲಕ ನಿರಂತರ ರಕ್ತದಾನ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇದೀಗ ಎರಡು ವರ್ಷ ಪೂರೈಸುತ್ತಿರುವ ಈ ಶುಭ ಸಂದರ್ಭದಲ್ಲಿ ಇತರ ರಕ್ತದಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಂಸ್ಥೆ ಹಾಗೂ ಎಲೆಮರೆಯಲ್ಲಿ ರಕ್ತದಾನ ಮಾಡುವ ಮೂಲಕ ಸೇವ ಮಾಡುತ್ತಿರುವವರನ್ನು ಗುರುತಿಸುವ ಸಲುವಾಗಿ ಅಭಯಹಸ್ತ ವರ್ಷದ ವ್ಯಕ್ತಿ 2022 ಹಾಗೂ ಯಕ್ಷಕಲಾ ವೈಭವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹಾಗೂ 2 ವರ್ಷಗಳಿಗೊಮ್ಮೆ ನಿರತರ ಈ ಕಾರ್ಯ ಮುಂದುವರೆಸುವ ಉದ್ದೇಶವನ್ನುಸಂಸ್ಥೆ ಹೊಂದಿದೆ.