ಪ್ರಾಂಶುಪಾಲರೊಂದಿಗೆ ಮಾತುಕತೆ- ಹಿಜಾಬ್ ವಿವಾದ ಸೌಹಾರ್ದತೆಯೊಂದಿಗೆ ಬಗೆಹರಿಯುವ ವಿಶ್ವಾಸವಿದೆ- ಜಿಐಓ
ಉಡುಪಿ:ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣ ತರಗತಿಗೆನಿರಾಕರಣೆ ಮಾಡಿದ ಹಿನ್ನಲೆಯಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಇದರ ನಿಯೋಗ ಪ್ರಾಂಶುಪಾಲರ ಬಳಿ ತೆರಳಿ ವಿಚಾರದ ಕುರಿತು ಚರ್ಚಿಸಿತು.
ಮುಸ್ಲಿಮ್ ವಿದ್ಯಾರ್ಥಿನಿಯರು ಇತ್ತೀಚ್ಚಿಗೆ ಶ್ರೈಕ್ಷಣಿಕವಾಗಿ ಮುಂದುವರಿಯುತ್ತಿದ್ದು ಇಂತಹ ಸಂದರ್ಭದಲ್ಲಿ ಅವರನ್ನು ಇಂತಹ ವಿವಾದಕ್ಕೀಡು ಮಾಡಿ ಮತ್ತಷ್ಟು ಶಿಕ್ಷಣದಿಂದ ಹಿಂದೆ ಸರಿಯುವ ಕ್ರಮಗಳನ್ನು ಜರುಗಿಸುವುದು ತಪ್ಪು. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತನ್ನದೆಯಾದ ಆಚರಣೆಗಳನ್ನು ಪಾಲಿಸುವ ಸಂಪೂರ್ಣವಾದ ಹಕ್ಕಿದೆ. ಇಂತಹ ಸಂದರ್ಭದಲ್ಲಿ ಕೇವಲ ಹಿಜಾಬ್ ಹಾಕಿದ ಕಾರಣಕ್ಕೆ ತರಗತಿಯ ಪ್ರವೇಶ ನಿರಾಕರಿಸುವುದು ಸಂವಿಧಾನ ಬಾಹಿರವೆಂದು ಪ್ರಾಂಶುಪಾಲರಿಗೆ ಮನವರಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ರುದ್ರೆ ಗೌಡ ಜಿ.ಐ.ಓ ನಿಯೋಗದೊಂದಿಗೆ ಮಾತನಾಡಿ ಆಡಳಿತ ಸಮಿತಿ, ಪೋಷಕರೊಂದಿಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಾಂಶುಪಾಲರು ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕನ್ನು ಎತ್ತಿ ಹಿಡಿದು ತರಗತಿ ಪ್ರವೇಶ ನೀಡುವ ವಿಶ್ವಾಸವಿದೆ ಎಂದು ನಿಯೋಗ ತಿಳಿಸಿದೆ. ಒಂದು ವೇಳೆ ಹಿಜಾಬ್ ನಿರಾಕರಣೆಯ ಆದೇಶವನ್ನು ಕಾನೂನು ಬಾಹಿರವಾಗಿ ಮುಂದುವರಿಸಿದ್ದಲ್ಲಿ ಕಾನೂನಾತ್ಮಕ ಹೋರಾಟ ಮುಂದುವರಿಸಲಿದ್ದೇವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.