ಹಿಜಾಬ್ ಧರಿಸಿದವರನ್ನು ತರಗತಿಯಿಂದ ಹೊರ ಹಾಕಿದ ಪ್ರಾಂಶುಪಾಲರು- ಅಮೃತ್ ಶೆಣೈ ಖಂಡನೆ
ಉಡುಪಿ 31: ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿರುವುದನ್ನು ಸಹಬಾಳ್ವೆ ಅಧ್ಯಕ್ಷ ಅಮೃತ್ ಶಣೈ ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿ ಪ್ರವೇಶ ನೀಡದಿರುವುದು ಸಂವಿಧಾನ ವಿರೋಧಿ, ಕಾನೂನು ಬಾಹಿರವಾದದ್ದು, ಉಡುಪಿಯಂತಹ ಸೌಹಾರ್ದಯುತ ಜಿಲ್ಲೆಯಲ್ಲಿ ಸಾಮರಸ್ಯ ಕದಡುವ ದುರುದ್ದೇಶದಿಂದ ಪ್ರಾಂಶುಪಾಲರು ಈ ಕಾರ್ಯ ಮಾಡಿದ್ದರೆ ಕೂಡಲೇ ಈ ಆದೇಶ ಹಿಂಪಡೆಯಬೇಕು. ಹಾಗೂ ವಿದ್ಯಾರ್ಥಿನಿಯರಿಗೆ ಪಾಠ ಪ್ರವಚನದಲ್ಲಿ ಭಸಗವಹಿಸಲು ಅವಕಾಶ ನೀಡ ಬೇಕು. ಒಂದು ವೇಳೆ ಇದು ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸಹಬಾಳ್ವೆ ಸಂಘಟನೆ ಸೇರಿ ಕಾಲೇಜಿನ ಎದುರು ಅನಿರ್ದಿಷ್ಟಾವಾಧಿ ಶಾಂತಿಯುತ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಹಾಗೂ ಇದೇ ವೇಳೆ ಹಿಜಾಬ್ ಧರಿಸುವುದರಿಂದ ಯಾರಿಗೂ ಸಮಸ್ಯೆಯಿಲ್ಲ. ಸಣ್ಣ ವಿಚಾರವನ್ನು ದೊಡ್ಡದು ಮಾಡಿ ಕೋಮು ಸಾಮರಸ್ಯ ಕೆಡಿಸುವ ಕೆಲಸ ಸರಕಾರಿ ಶಿಕ್ಷಕರು ಹಾಗೂ ಪ್ರಾಂಶುಪಾಲರು ಮಾಡಬಾರದೆಂದು ಅವರು ಮನವಿ ಮಾಡಿಕೊಂಡರು.