ಮಲ್ಪೆ: ಬೋಟುಗಳ ಬ್ಯಾಟರಿ ಕಳವು, ಮೂವರ ಬಂಧನ

ಮಲ್ಪೆ: ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನುಗಾರಿಕಾ ಬೋಟುಗಳ ಬ್ಯಾಟರಿಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಡವೂರು ನಿವಾಸಿ ಆಲ್ ಮುಹೀತ (20), ಬಲರಾಮ ನಗರದ ಆದರ್ಶ (19) ಮತ್ತು ವಡಭಾಂಡೇಶ್ವರದ ಯಾಸಿನ್ (18) ಎಂದು ಗುರುತಿಸಲಾಗಿದೆ.

ಜುಲೈ 14 ರಿಂದ 18 ಅವಧಿಯಲ್ಲಿ ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನು ಗಾರಿಕಾ ಬೋಟುಗಳಿಗೆ ಅಳವಡಿಸಿದ್ದ ನಾಲ್ಕು ದೊಡ್ಡ ಬ್ಯಾಟರಿಗಳು ಕಳವಾಗಿದ್ದ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಪ್ರವೃತ್ತರಾದ ಮಲ್ಪೆ ಪಿ.ಎಸ್.ಐ. ತಿಮ್ಮೇಶ್ ಬಿನ್ ನೇತೃತ್ವದ ತಂಡ ಕಲ್ಯಾಡಿ ಜಂಕ್ಷನ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ರಿಟ್ಜ್ ಕಾರಿನಲ್ಲಿ ತಿರುಗಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯ ವೇಳೆ ಕಳವು ಮಾಡಿರುವುದನ್ನು ಆರೋಪಿತರು ಒಪ್ಪಿಕೊಂಡಿದ್ದಾರೆ. ಸುಮಾರು 56 ಸಾವಿರ ಮೌಲ್ಯದ ಬೋಟಿನ ದೊಡ್ಡ ಬ್ಯಾಟರಿ -4 ಹಾಗೂ ಕಳ್ಳತನ ಮಾಡಲು ಉಪಯೋಗಿಸುವ ಮಾರುತಿ ರಿಟ್ಜ್ ಕಾರನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ .

Leave a Reply

Your email address will not be published. Required fields are marked *

error: Content is protected !!