ಉಡುಪಿ: ಎಸ್‌ಪಿ ಕಚೇರಿ, ನ್ಯಾಯಾಲಯ ಸೀಲ್‌ಡೌನ್!
ಉಡುಪಿ, ಜು.21: ಉಡುಪಿ ನ್ಯಾಯಾಲಯ ನ್ಯಾಯಾಧೀಶರೊಬ್ಬರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ಉಡುಪಿ ನ್ಯಾಯಾಲಯ ಸಂಕೀರ್ಣ ವನ್ನು ಎರಡು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಜೂ.21 ಮತ್ತು 22ರಂದು ಇಡೀ ನ್ಯಾಯಾಲಯವನ್ನು ಸ್ಯಾನಿಟೈಸ್ ಮಾಡಿ, ಜು.23ರಂದು ಮತ್ತೆ ಕಾರ್ಯ ಆರಂಭಿಸಲಾಗುವುದು. ಈ ಕಾರಣಕ್ಕೆ ಉಡುಪಿ ವಕೀಲರಿಗೆ ಈಗಾಗಲೇ ನೀಡಿರುವ ಎಲ್ಲ ಸಂದರ್ಶನಗಳನ್ನು ಎರಡು ದಿನಗಳ ಕಾಲ ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಮುಖ್ಯ ನ್ಯಾಯಾಧೀಶರ ಪ್ರಕಟನೆ ತಿಳಿಸಿದೆ.
ಉಡುಪಿ ಎಸ್‌ಪಿ ಕಚೇರಿಯಲ್ಲಿರುವ ಡಿಸಿಆರ್‌ಬಿ ಮಹಿಳಾ ಸಿಬಂದಿಗೆ ಕೊರೋನಾ ಪಾಸಿಟಿವ್ ಧೃಢವಾಗಿದ್ದು, ಕೆಲವು ದಿನಗಳಿಂದ ರಜೆಯಲ್ಲಿದ್ದ ಮಹಿಳಾ ಸಿಬಂದಿ ಸೋಮವಾರ ಕೆಲಸಕ್ಕೆ ಹಾಜರಾಗಿದ್ದರು. ಇಂದು ಅವರಿಗೆ ಸೋಂಕು ಧೃಢವಾದದ್ದರಿಂದ, ಎಸ್‌ಪಿ ಕಚೇರಿಯನ್ನು ಬಂದ್ ಮಾಡಿ ಸಾನಿಟೈಸರ್ ಮಾಡಲಾಗುತ್ತಿದ್ದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಪಿ ಕಚೇರಿಯಲ್ಲಿ ಈ ಮೊದಲು ಇಬ್ಬರಿಗೆ ಸೋಂಕು ಧೃಢವಾಗಿತ್ತು,