| ರಾಣಿಪೇಟೆ ಡಿ.21: ಇಲ್ಲೊಬ್ಬ ಪತಿ ಯೂಟ್ಯೂಬ್ ವಿಡಿಯೋ ಸಹಾಯದಿಂದ ಹೆಂಡತಿಗೆ ಹೆರಿಗೆ ಮಾಡಿಸಲು ಹೋಗಿ ನವಜಾತ ಶಿಶುವಿನ ಸಾವಿಗೆ ಕಾರಣನಾಗಿದ್ದಾನೆ.
ಈ ಘಟನೆ ನಡೆದಿರುವುದು ತಮಿಳುನಾಡಿನ ರಾಣಿಪೇಟೆಯಲ್ಲಿ. 28 ವರ್ಷದ ಗೋಮತಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿದಿಕೊಂಡಿದ್ದು. ಈ ವೇಳೆ ಪತಿ ಯೂಟ್ಯೂಬ್ ಮೂಲಕ ಹೆರಿಗೆ ಮಾಡಿಸಲು ಮುಂದಾಗಿದ್ದಾನೆ. ಆದರೆ ಹೆರಿಗೆ ಸಮಯದಲ್ಲಿ ಮಗು ಮೃತಪಟ್ಟಿದ್ದು, ತೀವ್ರ ರಕ್ತಸ್ರಾವ ಆಗಿರುವ ಕಾರಣ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ.
ಆರಂಭದಲ್ಲಿ ಗೋಮತಿ ಅವರನ್ನು ಪುನ್ನೈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಕರೆದೊಯ್ಯಲಾಯಿತು. ನಂತರ ಆಕೆಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಗೋಮತಿಯ ಪತಿ ಲೋಗನಾಥನ್ ಅವರು ವೈದ್ಯಕೀಯ ಸಹಾಯ ಪಡೆಯುವ ಬದಲು, ಮನೆಯಲ್ಲಿಯೇ ಹೆರಿಗೆ ಮಾಡಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಅಧಿಕಾರಿ ಮೋಹನ್ ದೂರು ದಾಖಲಿಸಿದ್ದಾರೆ. ಇದೀಗ ಶಿಶು ಸಾವು ಸೇರಿದಂತೆ ಸಂಪೂರ್ಣ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವರ್ಷದ ಹಿಂದೆ ಲೋಗನಾಥನ್ ಮತ್ತು ಗೋಮತಿ ವಿವಾಹವಾಗಿದ್ದರು. ಅವರು ಡಿಸೆಂಬರ್ 13 ರಂದು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಡಿಸೆಂಬರ್ 18 ರ ನಂತರ ಗೋಮತಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಲೋಗನಾಥನ್ ತನ್ನ ಸಹೋದರಿ ಗೀತಾಳ ಸಹಾಯವನ್ನು ಕೋರಿ, ಯೂಟ್ಯೂಬ್ನಲ್ಲಿ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಲು ಪ್ರಯತ್ನಿಸಿದ್ದಾನೆ. ಇದರಿಂದ ನವಜಾತ ಶಿಶು ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಅಸ್ವಸ್ಥ ಗೊಂಡಿದ್ದಾರೆ.
| |