ಭಗವದ್ಗೀತೆ ಕಲಿಸಲು ರಾಜ್ಯ ಸರ್ಕಾರಗಳು ಬಯಸಿದರೆ ಕಲಿಸಬಹುದು- ಕೇಂದ್ರ ಸರಕಾರ

ನವದೆಹಲಿ ಡಿ.21: ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದಲ್ಲಿ ಭಗವದ್ಗೀತೆ ಬೋಧನೆ ಬಗ್ಗೆ ಕೇಂದ್ರ ಸರಕಾರ ಮಹತ್ವದ ಮಾಹಿತಿ ನೀಡಿದೆ.

ಈ ಬಗ್ಗೆ ನಿನ್ನೆ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ನಡೆದ ವೇಳೆ ಮಾಹಿತಿ ನೀಡಿದ ಕೇಂದ್ರ ಸರಕಾರ ಪಠ್ಯಗಳಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಅಯಾ ರಾಜ್ಯ ಸರ್ಕಾರಗಳೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.

ಭಗವದ್ಗೀತೆ ಕಲಿಸಲು ಕೇಂದ್ರ ಸರ್ಕಾರವು ನಿಬಂಧನೆಗಳನ್ನು ತರುತ್ತಿದೆಯೇ ಎಂಬ ಉತ್ತರ ಮುಂಬೈನ ಬಿಜೆಪಿ ಸಂಸದ ಗೋಪಾಲ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಶಿಕ್ಷಣ ಸಚಿವೆ ಅನ್ನಪೂರ್ಣ ದೇವಿ ಅವರು, ವಿವಿಧ ತರಗತಿಗಳಲ್ಲಿ ರಾಜ್ಯ ಸರ್ಕಾರಗಳು ಭಗವದ್ಗೀತೆ ಕುರಿತು ಕಲಿಸಲು ಮುಂದಾಗಬಹುದು. ಇದಕ್ಕೆ ಕೇಂದ್ರದ ಅನುಮತಿ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ಸಿಬಿಎಸ್‌ಇ 6, 7 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಹಲವು ಅಧ್ಯಾಯಗಳನ್ನು ಕಲಿಸಲಾಗುತ್ತಿದೆ. ಹೀಗಾಗಿ ಭಗವದ್ಗೀತೆ ಕಲಿಸಲು ರಾಜ್ಯ ಸರ್ಕಾರಗಳು ಬಯಸಿದರೆ ಭಗವದ್ಗೀತೆ ಕಲಿಸಬಹುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!