ಕಾರ್ಮಿಕರಿಗೆ 10 ತಾಸು ಕೆಲಸ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಕಾರ್ಖಾನೆಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 8ರ ಬದಲು 10 ತಾಸು ಕೆಲಸ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಮುಂದಿನ 3 ತಿಂಗಳ ಕಾಲ ಅನ್ವಯವಾಗುವಂತೆ ಎಲ್ಲಾ ಕಾರ್ಖಾನೆಗಳ ಕಾರ್ಮಿಕರ ಕೆಲಸದ ಅವಧಿ ಮಿತಿಯನ್ನು 10 ಗಂಟೆಗೆ ಹೆಚ್ಚಳ ಮಾಡುವಂತೆ ಸರ್ಕಾರದ ಆದೇಶಿಸಿದೆ.
1948ರ ಕೈಗಾರಿಕೆಗಳ ಕಾಯ್ದೆಯ ಅಡಿ ನೋಂದಣಿ ಆಗಿರುವ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಾಯ್ದೆಯ 51ನೇ ವಿಧಿ ಹಾಗೂ 54ನೇ ವಿಧಿಯಿಂದ ವಿನಾಯಿತಿ ನೀಡಲಾಗಿದೆ.
ಮೇ.22ರಿಂದ ಆಗಸ್ಟ್ 21ರವರೆಗೆ ಮೂರು ತಿಂಗಳಿಗೆ ಅನ್ವಯವಾಗುವಂತೆ ದಿನದ ಕೆಲಸದ ಅವಧಿಯನ್ನು 8 ಗಂಟೆಗಳ ಬದಲಿಗೆ 10 ಗಂಟೆ ಹಾಗೂ ವಾರದ ಒಟ್ಟು ಕೆಲಸದ ಅವಧಿಯನ್ನು 48 ಗಂಟೆಯಿಂದ 60 ಗಂಟೆಗಳಿಗೆ ಹೆಚ್ಚಳ ಮಾಡಲಾಗಿದೆ.
ನಿಯಮ 59ರ ಪ್ರಕಾರ ಸೂಚಿಸಿದ ಅವಧಿಗಿಂತ ಹೆಚ್ಚು ಕೆಲಸ ಕೆಲಸ ಮಾಡಿದವರಿಗೆ ಓಟಿ ಭತ್ಯೆ ನೀಡುವ ನಿಯಮವನ್ನೂ ಮುಂದುವರೆಸಲಾಗಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.