ಪ.ಬಂಗಾಳದಲ್ಲಿ 7 ವರ್ಷದ ಬಾಲಕನಲ್ಲಿ ಓಮೈಕ್ರಾನ್ ಸೋಂಕು ಪತ್ತೆ
ಕೋಲ್ಕತ್ತ ಡಿ.15: ಪಶ್ಚಿಮ ಬಂಗಾಳದಲ್ಲಿ ಓಮೈಕ್ರಾನ್‌ನ ಮೊದಲ ಸೋಂಕು ಪ್ರಕರಣ ದೃಢವಾಗಿದೆ.
ಈ ಬಗ್ಗೆ ಇಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, 7 ವರ್ಷದ ಬಾಲಕನಲ್ಲಿ ಓಮೈಕ್ರಾನ್ ಸೋಂಕು ಪತ್ತೆಯಾಗಿದೆ. ಹಾಗೂ ಬಾಲಕನು ಇತ್ತೀಚೆಗೆ ಅಬುಧಾಬಿಯಿಂದ ಹೈದರಾಬಾದ್ ಮೂಲಕ ಪಶ್ಚಿಮ ಬಂಗಾಳಕ್ಕೆ ಮರಳಿದ್ದನೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಬಾಲಕ ಮುರ್ಷಿದಾಬಾದ್ ಜಿಲ್ಲೆಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಪೋಷಕರಲ್ಲಿ ಸೋಂಕು ಕಂಡುಬಂದಿಲ್ಲ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೋಂಕು ಬಹುತೇಕ ಎಲ್ಲ ರಾಷ್ಟ್ರಗಳಿಗೂ ಹಿಂದೆಂದೂ ಕಾಣದ ರೀತಿಯಲ್ಲಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.