ಮಂಗಳೂರು: ಪ್ರಧಾನ ಅಂಚೆ ಕಚೇರಿಯ ಇಬ್ಬರಿಗೆ ಸೋಂಕು, ನಾಳೆ 13 ಅಂಚೆ ಕಚೇರಿ ಬಂದ್
ಮಂಗಳೂರು: ಕರಾವಳಿಯಲ್ಲಿ ಕೊರೋನಾ ಸೋಂಕು ತೀವ್ರಗೊಂಡಿದ್ದು, ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಇಬ್ಬರು ಸಿಬ್ಬಂದಿಗೆ ಸೋಂಕು ತಗಲಿದೆ. ಹೀಗಾಗಿ ನಗರದ 13 ಅಂಚೆ ಕಚೇರಿಗಳು ಸೋಮವಾರ ಬಂದ್ ಆಗಲಿವೆ.
ಕೊರೋನಾ ದೃಢಪಟ್ಟ ಸಿಬ್ಬಂದಿ ಅಂಚೆ ಇಲಾಖೆಯ ನಗದು ವಿಭಾಗದಲ್ಲಿ ಕತ೯ವ್ಯ ನಿವ೯ಹಿಸುತ್ತಿದ್ದು, ನಗರದ ವಿವಿಧ ಅಂಚೆ ಕಚೇರಿಗಳಿಗೆ ತೆರಳಿ ನಗದು ವಹಿವಾಟು ನೋಡಿಕೊಳ್ಳುತ್ತಿದ್ದರು.
ಸೋಂಕು ತಡೆ ಭಾಗವಾಗಿ ಎಲ್ಲ ಅಂಚೆ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಕೂಡಾ ನಗರದಲ್ಲಿ ಅಂಚೆ ಕಚೇರಿಗಳು ಸಾವ೯ಜನಿಕ ಸೇವೆಗೆ ಲಭ್ಯ ಇರುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎನ್. ಶ್ರೀಹಷ೯ ತಿಳಿಸಿದ್ದಾರೆ.