ಕೆಳಸ್ತರದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲಿ: ಉದ್ಯಾವರ ನಾಗೇಶ್
ಉದ್ಯಾವರ: ಕೋವಿಡ್-19ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ಸರಕಾರ ಈ ತನಕ ಸ್ಪಷ್ಟ ನಿಲುವನ್ನು ತೆಗೆದುಕೊಂಡಿಲ್ಲ. ಈ ಮದ್ಯೆ ಆನ್‌ಲೈನ್ ಪಾಠವನ್ನು ಪ್ರಾರಂಭಿಸುವ ಬಗ್ಗೆ ಸರಕಾರ ಮಾತಾಡುತ್ತಿದೆ. ಹಳ್ಳಿ ಪ್ರದೇಶಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಎನ್ನುವುದು ಕಬ್ಬಿಣದ ಕಡಲೆಯಾಗಿದೆ. ಒಂದೆಡೆ ನೆಟ್‌ವರ್ಕ್‌ನ ಸಮಸ್ಯೆಯಾದರೆ ಇನ್ನೊಂದೆಡೆ ವಿದ್ಯುಶ್ಚಕ್ತಿಯ ಸಮಸ್ಯೆ ಇದಕ್ಕೂ ವೀರಿದ್ದು ಗ್ರಾಮಿಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಲ್ಲಿ ಆಂಡ್ರಾಯಿಡ್ ಮೊಬೈಲ್‌ಗಳ ಮತ್ತು ಲ್ಯಾಪ್‌ಟಾಪ್‌ಗಳ ಕೊರತೆ ಇದೆ. ವಸ್ತುಸ್ಥಿತಿ ಹೀಗಿರುವಾಗ ಸರಕಾರ ಆನ್‌ಲೈನ್ ಶಿಕ್ಷಣದ ಬಗ್ಗೆ ಒಲವು ತೋರಿಸುತ್ತಿರುವುದು ಒಂದು ವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಿಮುಖರನ್ನಾಗಿಸುತ್ತದೆ. ಸರಕಾರಕ್ಕೆ ಈ ವಾಸ್ತವದ ಅರಿವಿರಬೇಕು.
ಈ ಬಗ್ಗೆ ಸರಕಾರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್‌ರವರ ಆಪ್ತ ಸಹಾಯಕ ಉದ್ಯಾವರ ನಾಗೇಶ್ ಕುಮಾರ್‌ರವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಆಶ್ರಯದ ಯು.ಎಫ್.ಸಿ. ಪುಸ್ತಕ ಭಂಡಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ತಿಲಕ್‌ರಾಜ್ ಸಾಲ್ಯಾನ್‌ರವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರಮೇಶ್ ಕುಮಾರ್ ಉದ್ಯಾವರ, ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಸಂಸ್ಥೆಯ ಕೋಶಾಧಿಕಾರಿಗಳಾದ ಸೋಮಶೇಖರ್ ಸುರತ್ಕಲ್, ನಿರ್ದೇಶಕರಾದ ಯು. ಪಧ್ಮನಾಭ ಕಾಮತ್, ಸಂಸ್ಥೆಯ ಸದಸ್ಯರುಗಳಾದ ಅನೂಪ್ ಕುಮಾರ್, ಹಮೀದ್ ಸಾಬ್ಜಾನ್, ಸತೀಶ್ ಡಿ. ಸಾಲ್ಯಾನ್, ವಿಶ್ವನಾಥ ಪೂಜಾರಿ, ಶ್ರೀಧರ ಮಾಬಿಯಾನ್, ಲೋಕನಾಥ ಬೊಳ್ಜೆ, ಭಾಸ್ಕರ್ ಬಂಗೇರ, ಶಶಾಂಕ್ ಮಟ್ಟು, ಪುಂಡರೀಶ್ ಕುಂದರ್, ಶೇಖರ್ ಕೆ. ಕೋಟ್ಯಾನ್, ಸುಂದರ್ ಸುವರ್ಣ, ಶರತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ತಿಲಕ್‌ರಾಜ್ ಸಾಲ್ಯಾನ್‌ರವರು ಸ್ವಾಗತಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿಯವರು ವಂದಿಸಿದರು. ಮಾಜಿ ಅಧ್ಯಕ್ಷ ಆಬಿದ್ ಆಲಿಯವರು ಕಾರ್ಯಕ್ರಮ ನಿರ್ವಹಿಸಿದರು.