ಬ್ರಹ್ಮಾವರ: ಸೌದಿಯಲ್ಲಿ ಮೃತ ವ್ಯಕ್ತಿಯ ದೇಹ 112 ದಿನಗಳ ನಂತರ ಹುಟ್ಟೂರಿಗೆ

ಬ್ರಹ್ಮಾವರ: ಹಾರಾಡಿ ನಿವಾಸಿಯೊರ್ವರು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಲ್ಲಿ ಮೃತರಾಗಿದ್ದು, ಇವರ ಮೃತ ದೇಹ ಬರೋಬ್ಬರಿ 112 ದಿನದ ನಂತರ ಹುಟ್ಟೂರಿಗೆ ಬರಲಿದೆ.


ಫ್ರಾನ್ಸಿಸ್ ಪೌಲ್ ಡಿ. ಅಲ್ಮೇಡಾ (54) ಅವರು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಬಿಲ್ಡಿಂಗ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಮಾರ್ಚ್28 ರಂದು ವಾಹನ ಚಲಾಯಿಸಿಕೊಂಡು ಹೋಗುವಾಗ ತೀವೃ ಹೃದಯಾಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಜೆಡ್ಡಾದ ಕಿಂಗ್ ಫಹಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಾಪ್ಪಿದ್ದರು.


ಮೃತ ದೇಹ ಹುಟ್ಟೂರಿಗೆ ಇಂದು ಬರಬಹುದು ನಾಳೆ ಬರಬಹುದೆಂದು ಮನೆಯವರು ನೋವಿನಲ್ಲೇ ದಿನಗಳೆಯುತ್ತಿದ್ದರು. ಮೃತ ದೇಹ ಭಾರತಕ್ಕೆ ರವಾನಿಸಲು ಬೇಕಾದ ದಾಖಲಾತಿಗಳನ್ನು ಪಡೆದು ಅಲ್ಲಿಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಜುಲೈ೮ಕ್ಕೆ ಭಾರತಕ್ಕೆ ಸಾಗಿಸಲು ಟಿಕೆಟ್ ಕಾದಿರಿಸಿದ್ದರೂ ಕೊನೇ ಕ್ಷಣದಲ್ಲಿ ಕೊವಿಡ್ ಟೆಸ್ಟ್ ಸೀಲ್ ಹಾಕದ ಕಾರಣ ಶವ ಪೆಟ್ಟಿಗೆಯನ್ನು ವಿಮಾನದಲ್ಲಿ ಸಾಗಿಸಲು ಒಪ್ಪದೆ ಇರುವುದಿಂದ ಇದೀಗ ಈ ಎಲ್ಲಾ ಪ್ರಕ್ರಿಯೆ ಮುಗಿದು ಶನಿವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೃತ ದೇಹ ಪಡೆಯಲು ಮಗ ಸ್ಟ್ಯಾಲಿನ್ ಡಿ ಅಲ್ಮೇಡ ಹಾಗೂ ಸಂಬಂಧಿ ಎಡ್ವರ್ಡ್ ಸುನಿಲ್ ಲೋಬೋ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಲಾಕ್‌ಡೌನ್ ಇದ್ದು ಜಿಲ್ಲೆಯ ಗಡಿ ಮುಚ್ಚಿರುವುದರಿಂದ ಶವ ತರಲು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರು ಉಡುಪಿ ಜಿಲ್ಲಾಧಿಕಾರಿಯವರ ಅಂಗೀಕೃತ ಪಾಸ್ ಒದಗಿಸಿದ್ದಾರೆ. ಜು.೧೮ರಂದು ಬೆಳಿಗ್ಗೆ ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮೃತ ದೆಃಹ ಹೊರಡಲಿದ್ದು ಸಂಜೆ ಬ್ರಹ್ಮಾವರಕ್ಕೆ ಬರಲಿದ್ದು, ನಂತರ ಅಂತಿಮ ಕಾರ್ಯಗಳು ನಡೆಯಲಿದೆ.

3 thoughts on “ಬ್ರಹ್ಮಾವರ: ಸೌದಿಯಲ್ಲಿ ಮೃತ ವ್ಯಕ್ತಿಯ ದೇಹ 112 ದಿನಗಳ ನಂತರ ಹುಟ್ಟೂರಿಗೆ

Leave a Reply

Your email address will not be published. Required fields are marked *

error: Content is protected !!