ಉಡುಪಿ: ಹಿರಿಯ ಭಾಷಾವಿಜ್ಞಾನಿ ಡಾ.ಯು.ಪಿ. ಉಪಾಧ್ಯಾಯ ಇನ್ನಿಲ್ಲ
ಉಡುಪಿ: ಹಿರಿಯ ಭಾಷಾವಿಜ್ಞಾನಿ ಡಾ. ಯು ಪಿ ಉಪಾಧ್ಯಾಯ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಹಿರಿಯ ಭಾಷಾವಿಜ್ಞಾನಿ ತುಳು ಭಾಷೆಗೆ ಬೃಹತ್ ನಿಘಂಟು ರಚಿಸಿದ್ದರು, ತುಳು ಭಾಷಾ ಅಧ್ಯಯನಕ್ಕೆ ವಿಶೇಷ ಕೊಡುಗೆ ನೀಡಿದ್ದ ಉಪಾಧ್ಯಾಯ ದಂಪತಿಗಳು.
ಪತ್ನಿ ಸುಶೀಲಾ ಪಿ ಉಪಾಧ್ಯಾಯ ಕೂಡ ಹಲವಾರು ಕೃತಿಗಳನ್ನು ರಚಿಸಿದ್ದರು. ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಕೊಂಡಿದ್ದರು .
ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿರುವ ಇವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅನೇಕ ಸಾಹಿತಿಗಳು, ವಿಮರ್ಶಕರು ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾಷಾ ವಿಜ್ಞಾನ ಕ್ಷೇತ್ರ ಕ್ಕೇ ತುಂಬಲಾರದ ನಷ್ಟ
Deep condolence for the demise of Dr UP upadhyaya.
ತುಳು ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟ . ದೇವರು ಅವರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ.