| ಅಲಹಾಬಾದ್ ಡಿ.6: ಗಂಡನ ಮನೆಗೆ ಬರುವ ಸೊಸೆಗೆ ಕುಟುಂಬದಲ್ಲಿ ಮಗಳಿಗಿಂತ ಹೆಚ್ಚಿನ ಹಕ್ಕುಗಳಿವೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿರುವ ಹೈಕೋರ್ಟ್ ಇದಕ್ಕಾಗಿ ಈ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿದೆ. ಉತ್ತರ ಪ್ರದೇಶ ಅಗತ್ಯ ಸರಕುಗಳ (ಉತ್ಪಾದನೆ, ವಿತರಣೆ ಮತ್ತು ಬೆಲೆ ನಿರ್ಧಾರ) ಕಾಯ್ದೆ, 2016 ರಲ್ಲಿ ಮನೆಗೆ ಬರುವ ಸೊಸೆಯನ್ನು ಕುಟುಂಬದ ಸದಸ್ಯೆ ಎಂದು ಹೆಸರಿಸಲಾಗಿಲ್ಲ. ಅಲ್ಲದೆ 2019ರಲ್ಲಿ ರಾಜ್ಯ ಸರ್ಕಾರವೂ ಸೊಸೆ ಕುಟುಂಬದ ಸದಸ್ಯರಾಗದಂತೆ ಸೂಚಿಸಲಾಯಿತು. ಇದರಿಂದ ಮನೆಗೆ ಬರುವ ಸೊಸೆ ತನ್ನ ಹಕ್ಕುಗಳನ್ನು ಕಳೆದುಕೊಳ್ಳುತ್ತಾಳೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೂ ಸೊಸೆ ಅಥವಾ ವಿಧವೆಯ ಸೊಸೆಗೆ ಮಗಳಿಗಿಂತ ಕುಟುಂಬದಲ್ಲಿ ಹೆಚ್ಚಿನ ಹಕ್ಕುಗಳಿವೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮನೆಗೆ ಬಂದ ಸೊಸೆ ವಿಧವೆಯಲ್ಲದಿದ್ದರೂ, ತನ್ನ ಮಗಳಿಗಿಂತ (ವಿಚ್ಛೇದಿತ ಅಥವಾ ವಿಧವೆ) ಹೆಚ್ಚಿನ ಹಕ್ಕುಗಳನ್ನು ಹೊಂದಿದ್ದಾಳೆ ಎಂದು ಹೈಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ಪುಷ್ಪಾದೇವಿ ಎಂಬ ಮಹಿಳೆ ಚಿಕ್ಕಮ್ಮ ಮಹಾದೇವಿಯೊಂದಿಗೆ ಉಳಿದುಕೊಂಡಿದ್ದಾರೆ. ಅವಳಿಗೆ ಇಬ್ಬರು ಮಕ್ಕಳಿದ್ದಾರೆ. ಮಹಾದೇವಿ ಹೆಸರಿನ ಪಡಿತರ ಅಂಗಡಿ ಇತ್ತು. ಆದರೆ, ಪುಷ್ಪಾ ದೇವಿ ಚಿಕ್ಕಮ್ಮ ಮಹಾದೇವಿ ಇತ್ತೀಚೆಗೆ ನಿಧನರಾದರು. ಪುಷ್ಪಾ ದೇವಿ ಅವರು ಪಡಿತರ ಅಂಗಡಿಯನ್ನು ತನಗೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಅರ್ಜಿ ನೀಡಿದರು. ಆದರೆ ಆಗಸ್ಟ್ 5, 2019 ರಂದು, ಉತ್ತರ ಪ್ರದೇಶ ಸರ್ಕಾರವು ಪುಷ್ಪಾದೇವಿಗೆ ಪಡಿತರ ಅಂಗಡಿಯನ್ನು ಮಂಜೂರು ಮಾಡಲು ನಿರಾಕರಿಸಿತ್ತು. ಸಂತ್ರಸ್ತೆ ಅಲ್ ಹಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ಸೊಸೆಗೆ ಮಗಳಿಗಿಂತ ಕುಟುಂಬದಲ್ಲಿ ಹೆಚ್ಚಿನ ಹಕ್ಕುಇದೆ ಮತ್ತು ಅವಳಿಗೆ ಪಡಿತರ ಅಂಗಡಿಯನ್ನು ಮಂಜೂರು ಮಾಡಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾನೂನಿನಲ್ಲಿ ಬದಲಾವಣೆ ತರುವಂತೆ ಸೂಚನೆ ನೀಡಿದೆ. | |