‘ಉಡುಪಿ ಟೈಮ್ಸ್’ನ “ರೋಡಿಗಿಳಿಯಲಿ ನರ್ಮ್ ಬಸ್ ಅಭಿಯಾನ”ಕ್ಕೆ ವ್ಯಾಪಕ ಬೆಂಬಲ
ಉಡುಪಿ: (ಉಡುಪಿ ಟೈಮ್ಸ್ ವಿಶೇಷ ವರದಿ) ಜಿಲ್ಲೆಯ ಎಲ್ಲಾ ಗಡಿಗಳನ್ನು ಕೊರೋನಾ ಸೋಂಕು ಹರಡದಂತೆ ಜಿಲ್ಲಾಡಳಿತ 14 ದಿನ ಸೀಲ್ ಡೌನ್ ಮಾಡಿದ್ದು, ಜಿಲ್ಲೆಯ ಒಳಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವ ನಿರ್ಧಾರಕ್ಕೆ ಸಾರ್ವಜನಿಕರ ತೀವೃ ಆಕ್ಷೇಪ ವ್ಯಕ್ತವಾಗಿದೆ.
ಜುಲೈ 14 ರಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದಂತೆ ಖಾಸಗಿ ಬಸ್‌ನವರಿಗೆ ನಷ್ಟ ಸಂಭವಿಸಿದರಿಂದ, ಬಸ್ ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರು. ಆದರೆ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಖಾಸಗಿ ಬಸ್ ಮಾಲಕರ ಲಾಭಿಗೆ ಮಣಿದು ಸರಕಾರಿ ನರ್ಮ್ ಸ್ಥಗಿತಗೊಳಿಸಿದ್ದ ಆರೋಪ ಜಿಲ್ಲಾಡಳಿತದ ಮೇಲಿದೆ. ಸಾಮಾನ್ಯ ಜನರಿಗೆ ಸೇವೆ ನೀಡಬೇಕಾದ 40 ಕ್ಕೂ ಹೆಚ್ಚೂ ಸರಕಾರಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ನಿಟ್ಟೂರಿನ ಡಿಪೋದಲ್ಲಿ ನರ್ಮ್ ಬಸ್ ತುಕ್ಕು ಹಿಡಿಯುತ್ತಿದೆ.
ಈ ಬಗ್ಗೆ “ಉಡುಪಿ ಟೈಮ್ಸ್’ ಜನಪರ ಕಾಳಜಿಯಿಂದ “ರೋಡಿಗಿಳಿಯಲಿ ನರ್ಮ್ ಬಸ್ ಅಭಿಯಾನ”ಜುಲೈ 15ರಿಂದ ಪ್ರಾರಂಭಿಸಿದೆ. ಇದಕ್ಕೆ ಜನರ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಖಾಸಗಿ ಬಸ್ ಮಾಲಕರಿಗೆ ನಷ್ಟವಾದರೆ ಜಿಲ್ಲಾಡಳಿತ ಸರಕಾರಿ ನರ್ಮ್ ಸಂಚಾರ ಪ್ರಾರಂಭಿಸಲಿ ಎನ್ನುವ ಕೂಗು, ನಿತ್ಯ ದುಡಿಯಲು ಹೋಗುವ ಕಾರ್ಮಿಕರಿಂದ ಕೇಳಿ ಬರುತ್ತಿದೆ.
ಜಿಲ್ಲಾಡಳಿತದ ತಾರತಮ್ಯದ ವಿರುದ್ಧ ಜನಾಕ್ರೋಶ: ಒಂದೆಡೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಿಬಂದಿಗಳಿಗೆ ಸರಕಾರಿ ಬಸ್ ವ್ಯವಸ್ಥೆ ಮಾಡಿದ್ದು, ಜನಸಾಮಾನ್ಯರು ದುಡಿಯಲು ಹೋಗುವವರಿಗೆ ಸರಕಾರಿ ಬಸ್ ಸೇವೆ ನೀಡದಿರಿವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ, ಜಿಲ್ಲೆಯ ಜನರು ಅದರ ನಡುವೇ ಧೈರ್ಯದಿಂದ ಬದುಕಲು ಪ್ರಾರಂಭಿಸಬೇಕಾಗಿದೆ. ಈ ನಡುವೆ ಜಿಲ್ಲಾಡಳಿತ ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿದು ಜಿಲ್ಲೆಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಿರುವುದು ಆಕ್ಷ್ಯಮ್ಯವಾಗಿದೆ. ಖಾಸಗಿಯವರಿಗೆ ನಷ್ಟವಾದರೆ ಜಿಲ್ಲಾಡಳಿತ ಸರಕಾರಿ ಬಸ್ ಸಂಚಾರವನ್ನು ಶೀಘ್ರ ಪ್ರಾರಂಭಿಸಬೇಕೆಂದು ಹೊಟೇಲ್, ಅಂಗಡಿ ಮಾಲಕರು ಕೂಡ ಒತ್ತಾಯಿಸುತ್ತಿದ್ದಾರೆ.
ಒಂದೆಡೆ ಶಾಸಕರು ಜಿಲ್ಲೆಯ ಆರ್ಥಿಕ ಚಟುವಟಿಕೆ ತೀರಾ ಹದಗೆಟ್ಟಿದೆ, ಮತ್ತೆ ಲಾಕ್ ಡೌನ್ ಮಾಡಿದರೆ ಜನತೆ ತೀವೃ ಸಂಕಷ್ಟ ಎದುರಿಸುತ್ತಾರೆ ಹೇಳಿದ್ದಾರೆ . ಜನರು ಸಂಚಾರಕ್ಕೆ ಬಸ್‌ನ್ನೇ ಅವಲಂಬಿಸಿಕೊಂಡಿರುವಾಗ ಅದನ್ನು ಸ್ಥಗಿತಗೊಳಿಸಿರುವ ನಿರ್ಧಾರ ಸರಿಯಲ್ಲ, ಇನ್ನಾದರೂ ಸಾಮಾನ್ಯ ಜನರ ಕಷ್ಟ ಅರಿತು ಜಿಲ್ಲೆಯಾದ್ಯಂತ ಬಸ್ ಸಂಚಾರ ಪುನ: ಪ್ರಾರಂಭಿಸಬೇಕೆಂದು ಜಿಲ್ಲೆಯ ಜನರ ಒಕ್ಕೊರಲ ಆಗ್ರಹವಾಗಿದೆ.
ಉಡುಪಿ ಟೈಮ್ಸ್ ಈ ಅಭಿಯಾನಕ್ಕೆ ಜಿಲ್ಲೆಯ ನಾಗರಿಕರು ಕೈ ಜೋಡಿಸಿದ್ದು, ತಮ್ಮ ಬೆಂಬಲದ ವಿಡಿಯೋವನ್ನು ನಮಗೆ ಕಳುಹಿಸಿದ್ದು. ಈ ವಿಡಿಯೋ ಉಡುಪಿ ಟೈಮ್ಸ್ ಪೇಜ್ ನಲ್ಲಿ ವೀಕ್ಷಿಸಿ https://www.facebook.com/udupitimes/
ದಯಮಾಡಿ ಸಾರ್ವಜನಿಕ ಬಸ್ ಸಂಚಾರ ಪುನಃ ಪ್ರಾರಂಭಿಸಿ. ಜಿಲ್ಲಾಡಳಿತ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಕೊಟ್ಟು ಸಾರ್ವಜನಿಕ ಬಸ್ ಸಂಚಾರ ನಿಲ್ಲಿಸಿದ್ದು ಅತಿ ದೊಡ್ಡ ತಪ್ಪು. ಸ್ವಂತ ವಾಹನ ಇಲ್ಲದವರು ಆಟೊಗಳಿಗೆ ದುಬಾರಿ ದರ ಕೊಟ್ಟು, ಸಂಚರಿಸಬೇಕಾದ ಪರಿಸ್ಥಿತಿ ತಂದಿಟ್ಟಿದೆ ಜಿಲ್ಲಾಡಳಿತ. ಮಳೆಗಾಲದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು ಕಷ್ಟಸಾಧ್ಯ. ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಯಾದರೂ ಡಿಪೊದಲ್ಲಿ ಸುಮ್ಮನೆ ತುಕ್ಕು ಹಿಡಿಯುತ್ತಿರುವ ನರ್ಮ್ ಬಸ್ ಗಳನ್ನಾದರೂ ಓಡಿಸಿ. ಹೆಚ್ಚು ಬಸ್ ಗಳನ್ನು ಓಡಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದರೆ ಹೇಗೆ….? ಶೀಘ್ರವಾಗಿ ಸಾರ್ವಜನಿಕ ಬಸ್ ಸಂಚಾರ ಪ್ರಾರಂಭಿಸಿ ಎಂಬುದು ಒಕ್ಕೊರಲ ಆಗ್ರಹ.