ಕರಾವಳಿ ತೀರದಲ್ಲಿ ರವಿವಾರ ಈದುಲ್ ಫಿತ್ರ್ ಆಚರಣೆ

ಮಂಗಳೂರು: ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗಿಲ್ಲ. ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಶವ್ವಾಲ್ 1 ಆಗಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ರವಿವಾರ ಈದುಲ್ ಫಿತ್ರ್ ಆಚರಿಸಲು ಖಾಝಿಗಳಾದ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಅಲ್‌ಹಾಜ್ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರತ್ಯೇಕ ಪ್ರಕಟನೆ ತಿಳಿಸಿದೆ.

ಮೇ 24ರಂದು ಉಡುಪಿ ಜಾಮಿಯಾ ಮಸೀದಿಯಿಂದ ಈದ್ ಸಂದೇಶ ನೇರಪ್ರಸಾರ
ಕೋವಿಡ್ 19  ಲಾಕ್ಡೌನ್ ಹಿನ್ನೆಲೆಯಲ್ಲಿ ಮೇ 24 ಈದುಲ್ ಫಿತರ್ ದಿನದಂದು ಉಡುಪಿ ಜಾಮಿಯಾ ಮಸೀದಿಯ ವತಿಯಿಂದ ಈದ್ ಸಂದೇಶದ ನೇರ ಪ್ರಸಾರವು ಸ್ಥಳಿಯ ಸಿಫೋರ್ ಯು ಚಾನೆಲ್ ಮತ್ತು ಯೂಟ್ಯೂಬ್ ಗಳಲ್ಲಿ ನಡೆಯಲಿದೆ.  ಬೆಳಗ್ಗೆ 8:15 ಕ್ಕೆ ಮಸೀದಿಯ ಇಮಾಮ್ ಮತ್ತು ಖತೀಬ್ಮೌಲಾನಾ ರಶೀದ್ ಅಹ್ಮದ್ ಉಮ್ರಿ ನದ್ವಿ ಈದ್ ನಮಾಝನ್ನು ಮನೆಯಲ್ಲಿ ಹೇಗೆ ನಿರ್ವಹಿಸಬಹುದೆಂಬ ಮಾಹಿತಿ ನೀಡಲಿರುವರು.‌

ನಮಾಝಿನ ನಂತರ ಈದ್ ಸಂದೇಶ (ಖುತ್ಬಾ) ನೀಡಲಿರುವರು.‌ ನಂತರ ದೊಡ್ಡಣಗುಡ್ಡೆಯ ರಹ್ಮಾನಿಯಾ ಮಸೀದಿಯ ಧರ್ಮ‌ಗುರು ಮೌಲಾನ ಅಬ್ದುರ್ರಹ್ಮಾನ್, ಮಲ್ಪೆ ಸೈಯದಿನಾ ಅಬೂಬಕರ್ ಸಿದ್ದೀಕ್ ಮಸೀದಿಯ ಧರ್ಮಗುರು ಮೌಲಾನಾ ಇಮ್ರಾನುಲ್ಲಾಹ್ ಕಾಸ್ಮಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಎಚ್ ಎಮ್ ಯಾಸೀನ್ ಮಲ್ಪೆ, ಸಮ್ಮಾನ್ ಕೌನ್ಸೆಲಿಂಗ್ ಸೆಂಟರ್ ನ ಮೌಲಾನಾ ಅಬ್ದುಲ್ ಲತೀಫ್ ಮದನಿ, ಜಮಾಅತೇ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಙಿ, ಡಿಸ್ಕವರಿ ಇಸ್ಲಾಮ್ ಉಮರ್ ಶರೀಫ್ ಈದ್  ಸಂದೇಶ ನೀಡಲಿರುವರು.ಇದನ್ನು  ಸಿ ಫೋರ್ ಯು(ಡೆನ್ ಉಡುಪಿ-885, ಡೆನ್ ಕರ್ನಾಟಕ- 747, ವಿ ಫೋರ್ ನೆಟ್‌ವರ್ಕ್-2204, ಮಲನಾಡ್-253) ಚಾನೆಲ್ ಮತ್ತು ಯೂ ಟ್ಯುಬ್ ಗಳಲ್ಲಿ ನೇರವಾಗಿ ವೀಕ್ಷಸಬಹುದೆಂದು ಜಾಮಿಯಾ ಮಸೀದಿ ಉಡುಪಿಯ ಆಡಳಿತ ಸಮಿತಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!