| ನವದೆಹಲಿ ಡಿ.1: ಪೊಲೀಸರು, ರಾಜಕಾರಣಿಗಳು ಮುಂತಾದ ‘ಪ್ರಭಾವಿ’ ವರ್ಗದವರಿಗೆ ಸಾಲ ನೀಡುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿರುವ ಅವರು, ಪೊಲೀಸರು, ರಾಜಕಾರಣಿಗಳು ಮುಂತಾದ ‘ಪ್ರಭಾವಿ’ ವರ್ಗದವರಿಗೆ ಸಾಲ ಕೊಡದಂತೆ ಬ್ಯಾಂಕ್‌ಗಳಿಗೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಬ್ಯಾಂಕ್‌ಗಳು ‘ಕೆವೈಸಿ’ ಮತ್ತು ಇತರೆ ರೇಟಿಂಗ್ಸ್‌ಗಳ ಮೂಲಕ ಇಂತಹ ವರ್ಗದವರಿಗೆ ಸಾಲ ನೀಡುವ ಕುರಿತು ಮೌಲ್ಯಮಾಪನ ಮಾಡಬಹುದು. ಹಾಗೂ ಕ್ರಿಪ್ಟೊಕರೆನ್ಸಿ ಕುರಿತು ಹೊಸ ಮಸೂದೆಯ ಬಗ್ಗೆ ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದ್ದು ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯ ಬಳಿಕ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾಹಿತಿ ನೀಡಿರುವ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೃಷ್ಣರಾವ್ ಕರಾಡ್ ಅವರು, ಪೊಲೀಸರು ಮತ್ತು ರಾಜಕಾರಣಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ಸಮಸ್ಯೆ ಹೊಂದಿವೆ. ಇಂತಹ ಗ್ರಾಹರಿಗೆ ಸಾಲ ನೀಡುವ ಮೊದಲು ಬ್ಯಾಂಕ್‌ಗಳು ದಾಖಲೆಗಳನ್ನು ನೋಡುತ್ತವೆ ಎಂದು ತಿಳಿಸಿದ್ದಾರೆ.
| |