ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ವಿಸ್ತರಣೆ ಇಲ್ಲ: ಮುಖ್ಯಮಂತ್ರಿ

ಬೆಂಗಳೂರು: ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಸಾಕು. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಬೇರೆ ಮಾರ್ಗಗಳ ಬಗ್ಗೆ ಆಲೋಚಿಸಿ ಎಂದು ನಗರದ ವಲಯ ಉಸ್ತುವಾರಿಗಳಿಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಬೆಂಗಳೂರು ಲಾಕ್ ಡೌನ್ ಕುರಿತ ಸ್ಥಿತಿಗತಿ ಚರ್ಚೆ ವೇಳೆ ಬಹುತೇಕ ಸಚಿವರು ಲಾಕ್ ಡೌನ್ ವಿಸ್ತರಣೆ ಬಗ್ಗೆ ಒಲವು ವ್ಯಕ್ತಪಡಿಸಿದರು. ಒಂದು ವಾರದ ಲಾಕ್ಡೌನ್ ನಿಂದ ಕೊರೊನಾ ಹರಡುವಿಕೆ ನಿಯಂತ್ರಣ ಕಷ್ಟ,ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಅಗತ್ಯ ವಿದೆ ಎಂದರು. ಇದಕ್ಕೆ ಮತ್ತೆ ಕೆಲ ಸಚಿವರು ದನಿಗೂಡಿಸಿದರು.

ಕೊರೊನಾ ಕೇಸ್ ಗಳ ಸಂಖ್ಯೆ ಲಾಕ್ ಡೌನ್ ನಂತರದ ದಿನಗಳಲ್ಲಿಯೂ ಹೆಚ್ಚಾಗುತ್ತಲೇ ಇದೆ. ಲಾಕ್ ಡೌನ್ ಮುಗಿಯುವ ವೇಳೆಗೆ ಸಂಖ್ಯೆಯಲ್ಲಿ ಕಡಿಮೆಯಾಗಬಹುದು. ಆಗ ಲಾಕ್ ಡೌನ್ ತೆರವುಗೊಳಿಸಿದರೆ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹಾಗಾಗಿ ಲಾಕ್ ಡೌನ್ ಮತ್ತೊಂದು ವಾರ ವಿಸ್ತರಣೆ ಮಾಡಿದರೆ ಒಳಿತು ಎನ್ನುವ ಅಭಿಪ್ರಾಯವನ್ನು ವಲಯ ಉಸ್ತುವಾರಿ ಸಚಿವರು ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಭೆಯಲ್ಲಿ ಬಹುತೇಕರಿಂದ ಲಾಕ್ ಡೌನ್ ವಿಸ್ತರಣೆ ಬಗ್ಗೆ ಪದೇ ಪದೆ ಕೇಳಿಬಂದ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಯಡಿಯೂರಪ್ಪ,ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾತುಗಳು ಸಾಕು. ಈ ಬಗ್ಗೆ ಮುಂದೆ ನೋಡೋಣ, ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಬೇರೆ ಮಾರ್ಗಗಳ ಬಗ್ಗೆ ಆಲೋಚನೆ ಮಾಡಿ ಎಂದು ಸೂಚನೆ ನೀಡಿದರು. ಸೀಲ್ ಡೌನ್ ಪ್ರದೇಶಗಳಲ್ಲಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಿ,ಲಾಕ್ ಡೌನ್ ಅನ್ನು ಕಠಿಣವಾಗಿ ಜಾರಿಗೊಳಿಸಿ, ಕೊರೊನಾ ನಿಯಂತ್ರಣಕ್ಕೆ ಏನೇನು ಅಗತ್ಯವಿದೆಯೋ ಅದೆಲ್ಲವನ್ನೂ ಕಟ್ಟು ನಿಟ್ಟಾಗಿ ಪಾಲಿಸಿ,ಟೆಸ್ಟಿಂಗ್ ಹೆ್ಚ್ಚಳ ಮಾಡಿ, ಸೋಂಕಿತರಿಗೆ ಅಗತ್ಯ ತುರ್ತು ಆ್ಯಂಬುಲೆನ್ಸ್,ಬೆಡ್ ಗಳ ವ್ಯವಸ್ಥೆ ಮಾಡುವು ಮೊದಲ ಆದ್ಯತೆ ನೀಡಿ. ಖಾಸಗಿ ಆಸ್ಪತ್ರೆಗಳ ಜೊತ ಮಾತುಕತೆ ನಡೆಸಿ ಬೆಡ್ ಗಳನ್ನು ಪಡೆದುಕೊಳ್ಳಿ. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೂಕ್ತ ವ್ಯವಸ್ಥೆ, ಚಿಕಿತ್ಸೆ,ಸೌಲಭ್ಯಗಳ ಬಗ್ಗೆ ಗಮನ ಹರಿಸಿ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

error: Content is protected !!